ಬೆಂಗಳೂರು[ಮಾ.29]: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ಮಾಡಿದ ಪ್ರಮಾದದಿಂದಾಗಿ RCB 5 ರನ್’ಗಳ ರೋಚಕ ಸೋಲು ಕಂಡಿದೆ. ಇಷ್ಟೆಲ್ಲ ತಂತ್ರಜ್ಞಾನ ಮುಂದುವರೆದಿದ್ದರೂ ಈ ಎಡವಟ್ಟು ನಡೆದಿರುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವ್ಯರ್ಥವಾಯ್ತು ABD ಹೋರಾಟ- RCBಗೆ ವಿರೋಚಿತ ಸೋಲು

ಹೌದು, ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿತ್ತು. ಕಠಿಣ ಗುರಿ ಬೆನ್ನತ್ತಿದ ವಿರಾಟ್ ಪಡೆ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತು. ಕೊನೆಯ ಎಸೆತದಲ್ಲಿ ಆರ್’ಸಿಬಿ ಗೆಲ್ಲಲು 7 ರನ್’ಗಳ ಅವಶ್ಯಕತೆಯಿತ್ತು. ಕೊನೆಯ ಓವರ್ ಹಾಕಿದ ಮಾಲಿಂಗ ಕೊನೆಯ ಎಸೆತವು ನೋಬಾಲ್ ಆಗಿತ್ತು. ಆದರೆ ಅಂಪೈರ್ ನೋ ಬಾಲ್ ನೀಡದೆ ಇದ್ದಿದ್ದು ಆರ್’ಸಿಬಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಯಾಕೆಂದರೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಎಬಿಡಿ ಸ್ಟ್ರೈಕ್’ನಲ್ಲಿದ್ದರು. ಹಾಗಾಗಿ ಫಲಿತಾಂಶ ಏನು ಬೇಕಾದರೂ ಆಗಬಹುದಿತ್ತು ಎನ್ನುವುದು ಆರ್’ಸಿಬಿ ಅಭಿಮಾನಿಗಳ ಲೆಕ್ಕಾಚಾರ.

ಗೆಲುವಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್’ಗೆ ಶಾಕ್..!

ಪಂದ್ಯದ ಫಲಿತಾಂಶದ ಬಗ್ಗೆ ಮ್ಯಾಚ್ ಮುಕ್ತಾಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಕಿಡಿಕಾರಿದ್ದರು, ನಾವು ಯಾವುದೋ ಕ್ಲಬ್ ಮ್ಯಾಚ್ ಆಡುತ್ತಿಲ್ಲ. ಅಂಪೈರ್’ಗಳು ಸರಿಯಾಗಿ ತೀರ್ಪು ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಪೈರ್ ಈ ಪ್ರಮಾದದ ಬಗ್ಗೆ ಕ್ರಿಕೆಟ್ ಜಗತ್ತೂ ಕೂಡಾ ಟ್ವಿಟರ್’ನಲ್ಲಿ ಅಸಮಾದಾನ ವ್ಯಕ್ತಪಡಿಸಿವೆ. ಅಷ್ಟಕ್ಕೂ ಯಾವೆಲ್ಲಾ ಕ್ರಿಕೆಟಿಗರು ಏನಂದ್ರು ಅಂತ ನೀವೇ ಒಮ್ಮೆ ನೋಡಿ...