ಬೆಂಗಳೂರು(ಮಾ.28): ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ನಿರೀಕ್ಷೆ ಹುಸಿಯಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ RCB ಸೋಲೊಪ್ಪಿಕೊಂಡಿದೆ. ಎಬಿ ಡಿವಿಲಿಯರ್ಸ್ ಅಬ್ಬರಿಸಿದರೂ RCB ಗೆಲುವು ಮಾತ್ರ ಸಿಗಲಿಲ್ಲ.ಕೇವಲ 5 ರನ್‌ಗಳಿಂದ ವಿರಾಟ್ ಕೊಹ್ಲಿ 12ನೇ ಆವೃತ್ತಿಯಲ್ಲಿ ಸತತ 2ನೇ ಸೋಲಿಗೆ ಗುರಿಯಾಗಿದೆ.

ಇದನ್ನೂ ಓದಿ: IPL ಕ್ರಿಕೆಟ್‌ನಲ್ಲಿ ದಾಖಲೆ ಬರೆದ RCB ನಾಯಕ ವಿರಾಟ್ ಕೊಹ್ಲಿ!

ಗೆಲುವಿಗೆ RCB 188 ರನ್ ಟಾರ್ಗೆಟ್ ಪಡೆದಿತ್ತು. ಬ್ಯಾಟಿಂಗ್ ಆರ್ಡರ್‌ನಲ್ಲಿ ಬದಲಾವಣೆ ಮಾಡಿದ ಬೆಂಗಳೂರು ಮೊಯಿನ್ ಹಾಗೂ ಪಾರ್ಥೀವ್ ಪಟೇಲ್ ಆರಂಭಿಕರಾಗಿ ಕಣಕ್ಕಿಳಿದರು. ಇವರಿಬ್ಬರ ಸ್ಫೋಟಕ  ಬ್ಯಾಟಿಂಗ್ 27 ರನ್ ಜೊತೆಯಾಟ ನೀಡಿತು. ಆದರೆ ಮೊಯಿನ್ ಆಲಿ 17 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: IPL 2019: ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಯುವರಾಜ್ ಸಿಂಗ್!

4 ಬೌಂಡರಿ 1 ಸಿಕ್ಸರ್ ಸಿಡಿಸಿದ ಪಾರ್ಥೀವ್ 31 ರನ್‌ಗಳಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಾಟ RCBಗೆ ಚೇತರಿಕೆ ನೀಡಿತು. ಕೊಹ್ಲಿ ಐಪಿಎಲ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದ ಸಾಧನೆ ಮಾಡಿದರು. ಆದರೆ 46 ರನ್ ಸಿಡಿಸಿ ಕೊಹ್ಲಿ ವಿಕೆಟ್ ಪತನಗೊಂಡಿತು.

ಇದನ್ನೂ ಓದಿ: ಚುನಾವಣಾ ತಯಾರಿ ನಡುವೆ RCB ಪಂದ್ಯಕ್ಕೆ ಹಾಜರಾದ ಸಿದ್ದರಾಮಯ್ಯ!

ತಂಡದ ಜವಾಬ್ದಾರಿ ಹೊತ್ತ ಎಬಿ ಡಿವಿಲಿಯರ್ಸ್ ಅರ್ಧಶತಕ ಸಿಡಿಸಿ ಆಸರೆಯಾದರು. ಆದರೆ ಶಿಮ್ರೊನ್ ಹೆಟ್ಮೆಯರ್ ಸತತ 2ನೇ ಬಾರಿಗೆ ನಿರಾಸೆ ಅನುಭವಿಸಿದರು. ಡಿವಿಲಿಯರ್ಸ್ ಮತ್ತೆ ತಮ್ಮ 360 ಡಿಗ್ರಿ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಸಿಡಿಸಿದ ಸಿಕ್ಸರ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿತು.ಅಂತಿಮ 12 ಎಸೆತದಲ್ಲಿ ಬೆಂಗಳೂರು ಗೆಲುವಿಗೆ 22 ರನ್ ಅವಶ್ಯಕತೆ ಇತ್ತು. ಅಷ್ಟರಲ್ಲೇ ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ ವಿಕೆಟ್ ಪತನಗೊಂಡಿತು.

ಶಿವಂ ದುಬೆ  ಸಿಕ್ಸರ್ ಸಿಡಿಸಿದರೂ ಗೆಲುವಿನ ದಾರಿ ಕಷ್ಟವಾಯಿತು. ಜಸ್ಪ್ರೀತ್ ಬುಮ್ರಾ ಹಾಗೂ ಲಸಿತ್ ಮಲಿಂಗ ಓವರ್ RCB ಗೆಲುವನ್ನು ಕಸಿದುಕೊಂಡಿತು. ಅಂತಿಮ ಎಸೆತದಲ್ಲಿ 7 ರನ್ ಅವಶ್ಯತೆ ಇತ್ತು. ಮಲಿಂಗ ಎಸೆತ ನೋ ಬಾಲ್ ಇದ್ದರೂ ಅಂಪೈರ್ ಗಮನಿಸಲಿಲ್ಲ. RCB 1 ರನ್ ಗಳಿಸಲು ಮಾತ್ರ ಶಕ್ತವಾಯ್ತು. ಹೀಗಾಗಿ ರೋಚಕ ಪಂದ್ಯದಲ್ಲಿ ಮುಂಬೈ 6 ರನ್ ಗೆಲುವು ಸಾಧಿಸಿತು. ಎಬಿಡಿ ಅಜೇಯ 70 ರನ್ ಸಿಡಿಸಿ ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿತ್ತು. ನಾಯಕ ರೋಹಿತ್ ಶರ್ಮಾ 48, ಸೂರ್ಯಕುಮಾರ್ ಯಾದವ್ 38 ಹಾಗೂ ಅಜೇಯ 32 ರನ್ ಚಚ್ಚಿದರು. ಈ ಮೂಲಕ ಬೆಂಗಳೂರು ತಂಡಕ್ಕೆ 188 ರನ್ ಟಾರ್ಗೆಟ್ ನೀಡಿತ್ತು