ಹೈದರಾಬಾದ್(ಮಾ.31): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ 2 ಪಂದ್ಯ ಸೋತು 3ನೇ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿ ಶೋಚನೀಯವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಗೆಲುವಿಗೆ 232 ರನ್ ಟಾರ್ಗೆಟ್ ಪಡೆದಿರುವ RCB ಅಲ್ಪ ಮೊತ್ತಕ್ಕೆ ಆಲೌಟ್ ಆಗೋ ಭೀತಿ ಎದುರಿಸುತ್ತಿದೆ.

ಇದನ್ನೂ ಓದಿ: IPL 2019: ಬೈರ್‌ಸ್ಟೋ, ವಾರ್ನರ್ ಸೆಂಚುರಿ- RCBಗೆ 232 ರನ್ ಗುರಿ

ಹೈದರಾಬಾದ್ ತಂಡದ ಜಾನಿ ಬೈರ್‌ಸ್ಟೋ ಹಾಗೂ ಡೇವಿಡ್ ವಾರ್ನರ್ ಸೆಂಚುರಿಯಿಂದ SRH 231 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಇಳಿದ RCB ಶಿಮ್ರೊನ್ ಹೆಟ್ಮೆಯರ್ ಆರಂಭಿಕನಾಗಿ ಕಣಕ್ಕಿಳಿಸಿತು. ಆರ್ಡರ್‌ನಲ್ಲಿ ಬದಲಾವಣೆ ಮಾಡಿದರೂ RCB ಚೇತರಿಕೆ ಕಾಣಲಿಲ್ಲ. RCB ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳೆಲ್ಲಾ ಒಂದಂಕಿಗೆ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಯಾರು ಈ ಪ್ರಯಾಸ್ ರೇ ಬರ್ಮಾನ್..?

ಪಾರ್ಥೀವ್ ಪಟೇಲ್, ಹೆಟ್ಮೆಯರ್, ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮೊಯಿನ್ ಆಲಿ, ಶಿವಂ ದುಬೆ ಸೇರಿದೆಂತೆ RCB ಘಟಾನುಘಟಿ ಬ್ಯಾಟ್ಸ್‌ಮನ್‌ಗಳೆಲ್ಲಾ ಕಣ್ಮುಚ್ಚಿ ತೆರೆಯೋದ್ರೊಳಗೆ ಔಟಾಗಿ ಪೆವಿಲಿಯನ್ ಸೇರಿದ್ದರು. RCB ಕೇವಲ 35 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು. ಸೋಲಿನ ಸುಳಿಗೆ ಸಿಲುಕಿದೆ.