ಹೈದರಾಬಾದ್(ಮಾ.31): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಜಾನಿ ಬೈರ್‌ಸ್ಟೋ ಹಾಗೂ ಡೇವಿಡ್ ವಾರ್ನರ್ ಭರ್ಜರಿ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 231 ರನ್ ಸಿಡಿಸಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ RCB ಗೆಲುವಿಗೆ 232 ರನ್ ಸಿಡಿಸಬೇಕಿದೆ.

ಇದನ್ನೂ ಓದಿ: RCB ವಿರುದ್ಧ ಬೈರ್‌ಸ್ಟೋ ಶತಕ- 12ನೇ ಆವೃತ್ತಿಯಲ್ಲಿ ದಾಖಲಾಯ್ತು 2ನೇ ಸೆಂಚುರಿ!

ಟಾಸ್ ಸೋತು ಬ್ಯಾಟಿಂಗ್ ಇಳಿದ SRH ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಅಬ್ಬರಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 185 ರನ್ ಸಿಡಿಸಿತು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಗರಿಷ್ಟ ಜೊತೆಯಾಟ ಅನ್ನೋ ಹೆಗ್ಗಳಿಕೆಗೂ ಪಾತ್ರವಾಯಿತು. RCB ಬೌಲರ್‌ಗಳನ್ನು ಸುಸ್ತು ಹೊಡೆಸಿದ ಬೈರ್‌ಸ್ಟೋ, ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸಿದರು. ಇತ್ತರ ವಾರ್ನರ್ ಆರ್ಧಶತಕ ಸಿಡಿಸಿ ಮಿಂಚಿದರು. 

ಇದನ್ನೂ ಓದಿ: ಯಾರು ಈ ಪ್ರಯಾಸ್ ರೇ ಬರ್ಮಾನ್..?

ಬೈರ್‌ಸ್ಟೋ 56 ಎಸೆತದಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 114 ರನ್ ಸಿಡಿಸಿ ಔಟಾದರು. ಇನ್ನು ಡೇವಿಡ್ ವಾರ್ನರ್ ಆಜೇಯ ರನ್ ಹಾಗೂ ವಿಜಯ್ ಶಂಕರ್ ಅಜೇಯ ರನ್ ಸಿಡಿಸಿದರು. ಈ ಮೂಲಕ  SRH ವಿಕೆಟ್ ನಷ್ಟಕ್ಕೆ ರನ್ ಸಿಡಿಸಿತು. RCB ಪರ ಯಜುವೆಂದ್ರ ಚೆಹಾಲ್ ಏಕೈಕ ವಿಕೆಟ್ ಕಬಳಿಸಿದರು.