ಜೈಪುರ(ಮಾ.25): 12ನೇ ಆವೃತ್ತಿ ಐಪಿಎಲ್ ಟೂರ್ನಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು(ಮಾ.25) ಏಕೈಕ ಪಂದ್ಯ ನಡೆಯಲಿದೆ. ಜೈಪುರದ ಸಾವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೋರಾಟ ನಡೆಸಲಿದೆ. 

ಇದನ್ನೂ ಓದಿ: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ರಸೆಲ್!

ಬಾಲ್ ಟ್ಯಾಂಪರಿಂಗ್‌ನಿಂದ ಕಳೆದ ವರ್ಷ ಐಪಿಎಲ್ ಟೂರ್ನಿಯಿಂದ ಹೊರಗುಳಿದ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಇದೀಗ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಹೀಗಾಗಿ ರಾಯಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅಂಜಿಕ್ಯ ರಹಾನೆ ನಾಯಕತ್ವದಲ್ಲಿ ಸ್ಮಿತ್ ಆಡುವ ಸಾಧ್ಯತೆ ಇದೆ. 

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಆರ್ ಅಶ್ವಿನ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಪ್ರಮುಖ ಆಕರ್ಷಣೆ. ಈ ಬಾರಿ ತಂಡದಲ್ಲಿ ಹಲವು ಬದಲಾವಣೆ ಮಾಡಿರುವ ಪಂಜಾಬ್ ಶುಭಾರಂಭದ ವಿಶ್ವಾಸದಲ್ಲಿದೆ. ಇಂದಿನ ಮುಖಾಮುಖಿಗೆ ಉಭಯ ತಂಡಗಳ ಸಂಭವನೀಯ  ಪ್ಲೇಯಿಂಗ್ ಇಲೆವೆನ್ ಇಲ್ಲಿದೆ.

ಇದನ್ನೂ ಓದಿ: IPL 2019: ಇಂದು ರಾಯಲ್ಸ್‌-ಕಿಂಗ್ಸ್‌ ಕದನ!

ರಾಜಸ್ಥಾನ ರಾಯಲ್ಸ್ ಸಂಭವನೀಯ 11:
ಅಜಿಂಕ್ಯ ರಹಾನೆ, ಜೊಸ್ ಬಟ್ಲರ್, ಸಂಜು ಸಾಮ್ಸನ್, ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ, ಕೆ.ಗೌತಮ್, ಜೊಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಧವಲ್ ಕುಲಕರ್ಣಿ, ಜಯದೇವ್ ಉನಾದ್ಕಟ್

ಕಿಂಗ್ಸ್ XI ಪಂಜಾಬ್ ಸಂಭನೀಯ 11:
ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಮನ್ದೀಪ್ ಸಿಂಗ್, ಆರ್ ಅಶ್ವಿನ್, ಸ್ಯಾಮ್ ಕುರ್ರನ್, ಮಜೀಬ್ ಯಆರ್ ರಹಮಾನ್, ಆ್ಯಂಡ್ರು ಟೈ, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ.