ಕೋಲ್ಕತಾ(ಮಾ.25): ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್  ಅಬ್ಬರಿಸೋ ಮೂಲಕ ಐಪಿಎಲ್ 12ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. 182 ರನ್ ಚೇಸ್ ಮಾಡಿದ KKRಗೆ ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವು ತಂದುಕೊಟ್ಟರು. ರಸೆಲ್ ಅಜೇಯ 49 ರನ್ ಸಿಡಿಸೋ ಮೂಲಕ ಇನ್ನೂ 2 ಎಸೆತ ಇರುವಂತೆ KKR ಗೆಲುವು ಸಾಧಿಸಿತು.

ಇದನ್ನೂ ಓದಿ: IPL 2019: ಬುಮ್ರಾ ಇಂಜುರಿ, ವಿರಾಟ್ ಕೊಹ್ಲಿಗೆ ಆತಂಕ!

19 ಎಸೆತದಲ್ಲಿ 4 ಬೌಂಡರಿ 4 ಭರ್ಜರಿ ಸಿಕ್ಸರ್ ಸಿಡಿಸೋ ಮೂಲಕ ಅಜೇಯ 49 ರನ್ ಸಿಡಿಸಿದ ಆ್ಯಂಡ್ರೆ ರಸೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ರಸೆಲ್ ನೇರವಾಗಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ವಿಶೇಷ ಅಭಿಮಾನಿ ಬಳಿ ತೆರಳಿದರು. ಬಳಿಕ ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಭಿಮಾನಿಗೆ ನೀಡಿದರು.

 

 

ಇದನ್ನೂ ಓದಿ: IPL 2019: ಮುಂಬೈ VS ಡೆಲ್ಲಿ ಪಂದ್ಯಕ್ಕೆ ವಿಶೇಷ ಅತಿಥಿ!

ರಸೆಲ್ ಆಗಮಿಸಿ ತನಗೆ ಪ್ರಶಸ್ತಿ ನೀಡಿರುವುದು ಅಭಿಮಾನಿಯ ಸಂತಸ ಇಮ್ಮಡಿಗೊಳಿಸಿದೆ. ರಸೆಲ್ ನಡೆಯನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟ ರಸೆಲ್, ಅಭಿಮಾನಿಗೆ ಪ್ರೀತಿ ತೋರಿರುವುದು ಪ್ರಶಂಸನೀಯ ಎಂದು ಸಾಮಾಜಿ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.