ಮುಂಬೈ(ಮಾ.24): ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಳಿ ಅತ್ಯಂತ ದುಬಾರಿ ಕಾರುಗಳಿವೆ. ಬೆಂಟ್ಲಿ ಬೆಂಟೆಯಾಗ್, ಮರ್ಸಡೀಸ್ ಬೆಂಜ್, ಲ್ಯಾಂಡ್ ರೋವರ್,  ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿಗಳು ಕಾರುಗಳೆಲ್ಲಾ ಅಂಬಾನಿ ಮನೆಯ ಪಾರ್ಕ್‌ನಲ್ಲಿವೆ. ವಿಶೇಷ ಅಂದರೆ ಅಂಬಾನಿ ಮನೆಯ ಕಾರು ಪಾರ್ಕಿಂಗ್‌ನಲ್ಲಿ 168 ಕಾರುಗಳನ್ನ ಪಾರ್ಕ್ ಮಾಡೋ ಸ್ಥಳವಕಾಶವಿದೆ. ಇದೀಗ ಮುಖೇಶ್ ಅಂಬಾನಿ ಕಾರು ಸಂಗ್ರಹ ಕಂಡು  ಮುಂಬೈ ಇಂಡಿಯನ್ಸ್ ಆಟಾಗಾರರು ದಂಗಾಗಿದ್ದಾರೆ.

ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಮುಂಬೈ ಇಂಡಿಯನ್ಸ್ ಕ್ರಿಕೆಟಿಗರಿಗಾಗಿ ಅಂಬಾನಿ ಮನೆ ಆ್ಯಂಟಿಲಿಯಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಂಬಾನಿ ಕಾರು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರುಗಳನ್ನ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಮ್ಮ ಕನಸಿನ ಕಾರುಗಳೆಲ್ಲಾ ಅಂಬಾನಿ ಕಾರು ಸಂಗ್ರಹಾಲಯದಲ್ಲಿತ್ತು.

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

ವಿಡಿಯೋದಲ್ಲಿ ಬೆಂಟ್ಲಿ ಬೆಂಟೆಯಾಗ್, ಮರ್ಸಡೀಸ್ ಬೆಂಝ್ E-Class, ಮರ್ಸಡೀಸ್ G63 AMG, ಬೆಂಟ್ಲಿ ಮಲ್ಸೆನೆ , ಎರಡು ರೇಂಜ್ ರೋವರ್ SUV, ರೋಲ್ಸ್ ರಾಯ್ಸ್ ಫಾಂಟಮ್, ಪೊರ್ಶೆ  ಕಾರುಗಳು ಕಾಣಿಸುತ್ತಿವೆ. ಸಂಪೂರ್ಣ ಕಾರು ಕಲೆಕ್ಷನ್ ಈ ವಿಡಿಯೋದಲ್ಲಿ ತೋರಿಸಿಲ್ಲ. BMW 7 ಸೀರಿಸ್, ಲ್ಯಾಂಬೋರ್ಗಿನಿ ಉರುಸ್ ಸೇರದಂತೆ ಹಲವು ಕಾರುಗಳು ಅಂಬಾನಿ ಬಳಿ ಇವೆ.