ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಇದೀಗ ನೀತಾ ಅಂಬಾನಿ ಮನೆಯ ದೇವರ ಕೋಣೆ ಸೇರಿದೆ. ಮುಂಬೈ ಓಡತಿ ನೀತಾ ಅಂಬಾನಿ ಟ್ರೋಫಿ ಇಟ್ಟು ಭಜನೆ ಮಾಡಿದ ವೀಡಿಯೋ ವೈರಲ್ ಆಗಿದೆ. 

ಮುಂಬೈ(ಮೇ.15): ಐಪಿಎಲ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನದ ಮೂಲಕ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಐಪಿಎಲ್ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಟ್ರೋಫಿ ಹಾಗೂ ಆಟಾಗಾರರ ಜೊತೆ ರೋಡ್ ಶೋ ನಡೆಸಿತ್ತು. ಇದೀಗ ತಂಡದ ಒಡತಿ ನೀತಾ ಅಂಬಾನಿ, ದೇವರ ಕೋಣೆಯಲ್ಲಿ ಟ್ರೋಫಿ ಇಟ್ಟು ಭಜನೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಚಾಂಪಿಯನ್ ಮುಂಬೈ ತಂಡದಿಂದ ರೋಡ್ ಶೋ!

ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಆ್ಯಂಟಿಲಿಯಾ ಮನೆಯ ದೇವರ ಕೋಣೆಗೆ ನೀತಾ ಅಂಬಾನಿ ಐಪಿಎಲ್ ಟ್ರೋಫಿ ತಂದಿದ್ದಾರೆ. ಬಳಿಕ ಕೃಷ್ಣನ ಮೂರ್ತಿ ಪಾದದ ಬಳಿ ಐಪಿಎಲ್ ಟ್ರೋಫಿ ಇಟ್ಟು ಭಜನೆ ಮಾಡಿದ್ದಾರೆ. ನೀತಾ ಅಂಬಾನಿ ಭಜನೆ ಇದೀಗ ವೈರಲ್ ಆಗಿದೆ. ಮನೆಯ ಭಜನೆ ಬಳಿಕ ಮುಂಬೈನ ಪ್ರಸಿದ್ಧ ವಿನಾಯ ಮಂದಿರಕ್ಕೆ ತೆರಳಿ ಐಪಿಎಲ್ ಟ್ರೋಫಿಗೆ ಪೂಜೆ ಸಲ್ಲಿಸಿದ್ದಾರೆ. 

Scroll to load tweet…

ಇದನ್ನೂ ಓದಿ: ಧೈರ್ಯ ಸಾಕಾಗಲಿಲ್ಲ- ಕೊನೆಯ ಎಸೆತ ನೋಡ್ಲಿಲ್ಲ: ನೀತಾ ಅಂಬಾನಿ

12ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಗಾಗಿ ಹೋರಾಡಿತ್ತು. ರೋಚಕ ಪಂದ್ಯದಲ್ಲಿ ಮುಂಬೈ 1 ರನ್ ಗೆಲುವು ಸಾಧಿಸಿತು. ಈ ಮೂಲಕ 4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಇಷ್ಟೇ ಅಲ್ಲ ಗರಿಷ್ಠ ಐಪಿಎಲ್ ಟ್ರೋಫಿ ಗೆದ್ದ ತಂಡ ಅನ್ನೋ ಹಿರಿಮೆಗೆ ಪಾತ್ರವಾಗಿದೆ.