ಕೋಲ್ಕತಾ(ಏ.25): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನಕ್ಕೇರುವ ಪೈಪೋಟಿ ಜೋರಾಗಿದೆ. ಪ್ರತಿ ತಂಡದ ಫಲಿತಾಂಶ ಕೂಡ ಈಗ ಮುಖ್ಯ. ಇಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. 

ಇದನ್ನೂ ಓದಿ: RCBಗೆ ಹ್ಯಾಟ್ರಿಕ್ ಗೆಲುವು- ಅಂಕಪಟ್ಟಿಯಲ್ಲಿ ಏರಿಕೆ ಕಂಡ ಕೊಹ್ಲಿ ಬಾಯ್ಸ್!

ಉಭಯ ತಂಡಗಳಿಗೂ ಇದು ಮಾಡು ಇಲ್ಲವೆ ಮಡಿ ಪಂದ್ಯ. ಅದರಲ್ಲೂ KKR ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಇನ್ನುಳಿದ 4 ಪಂದ್ಯಗಳನ್ನೂ ಗೆಲ್ಲಲಬೇಕಿದೆ. ಸದ್ಯ ಆಡಿದ 10ರಲ್ಲಿ 4 ಗೆಲುವಿನ ಮೂಲಕ 8 ಅಂಕಗಳಿಸಿದೆ. ಹೀಗಾಗಿ ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೆ 16 ಅಂಕಗಳೊಂದಿಗೆ ಪ್ಲೇ ಆಫ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಆಪತ್ತು- ತವರಿನ ಪಂದ್ಯ ಡೌಟ್!

ಇತ್ತ ರಾಜಸ್ಥಾನ ರಾಯಲ್ಸ್ 10ರಲ್ಲಿ 3 ಪಂದ್ಯ ಗೆದ್ದಿದೆ. ಹೀಗಾಗಿ ಇನ್ನುಳಿದ 4 ಪಂದ್ಯ ಗೆದ್ದರೆ 14 ಅಂಕ ಸಂಪಾದಿಸಲು ಸಾಧ್ಯವಿದೆ. ಆದರೆ ಪ್ಲೇ ಆಫ್ ಸ್ಥಾನ ಸಂಪಾದಿಸಲು ಉಳಿತ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕು. ತವರಿನಲ್ಲಿ ಕೆಕೆಆರ್ ಬಲಿಷ್ಠವಾಗಿದೆ ನಿಜ. ಆದೆರೆ ರಾಜಸ್ಥಾನ ರಾಯಲ್ಸ್ ಉತ್ತಮ ಲಯ ಕಂಡುಕೊಂಡಿದ್ದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಹೀಗಾಗಿ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.