ಬೆಂಗಳೂರು(ಏ.23): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೀಗ ಸಂಭ್ರಮದ ವಾತಾವರಣ. ಸತತ 2 ಪಂದ್ಯ ಗೆದ್ದಿರುವ ಕೊಹ್ಲಿ ಪಡೆ ಆತ್ಮವಿಶ್ವಾಸ ಹೆಚ್ಚಾಗಿದೆ. ಇದರ ನಡುವೆ ಡ್ರೆಸ್ಸಿಂಗ್ ರೂಂ ಸೀಕ್ರೆಟ್‌ಗಳು, ತಮಾಷೆಗಳು ಒಂದೊಂದಾಗಿ ಹೊರಬರುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿ ವಿಕೆಟ್ ಕಬಳಿಸಿದ ವೇಗಿ ಡೇಲ್ ಸ್ಟೇನ್ ಸಂಭ್ರಮಾಚರಣೆ ವೇಳೆ ನಾಯಕ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡಿದ್ದರು. ಈ ಅಪ್ಪುಗೆ ಭಾರಿ ಚರ್ಚೆಯಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ 2010ರಲ್ಲಿ ಕೊಹ್ಲಿ ಹಾಗೂ ಡೇಲ್ ಸ್ಟೇನ್ ಅಪ್ಪುಗೆ ಹಾಗೂ ಇದೀಗ 2019ರಲ್ಲಿ ಕೊಹ್ಲಿ ಡೇಲ್ ಸ್ಟೇನ್ ಅಪ್ಪುಗೆ ಫೋಟೋ ಹರಿದಾಡುತ್ತಿದೆ. ಇದಕ್ಕೆ ಸ್ವತಃ ಕೊಹ್ಲಿ ಹಾಗೂ ಡೇಲ್ ಸ್ಟೇನ್ ಪ್ರತಿಕ್ರಿಯೆ ನೀಡಿದ್ದಾರೆ. 2010 ಹಾಗೂ ಈಗ ಡೇಲ್ ಸ್ಟೇನ್ ಹಾಗೇ ಇದ್ದಾರೆ. ಆದರೆ ನಾನು ಮಾತ್ರ ಬದಲಾಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

 

 

ಡೇಲ್ ಸ್ಟೇನ್ ಹಾಗೂ ಕೊಹ್ಲಿ ನಡುವಿನ ಅಪ್ಪುಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗಿದೆ.  ಪತ್ನಿ ಅನುಷ್ಕಾ  ಶರ್ಮಾ ಕೂಡ ಈ ರೀತಿ ಕೊಹ್ಲಿಯನ್ನು ಅಪ್ಪಿಕೊಂಡಿಲ್ಲ ಎಂದು ಟ್ವಿಟರ್‌ನಲ್ಲಿ ತಮಾಷೆ ಮಾಡಲಾಗಿದೆ.