ಮೊಹಾಲಿ(ಏ.01): ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಮೊಹಾಲಿಯಲ್ಲಿ ನಡೆಯಲಿರುವ ರೋಚಕ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮುಂಬೈ ವಿರುದ್ಧ ಗೆಲುವು ಸಾಧಿಸಿರುವ ಪಂಜಾಬ್ ಇದೀಗ ಡೆಲ್ಲಿ ವಿರುದ್ಧವೂ ಅಬ್ಬರಿಸೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ: RCB ಹೀನಾಯ ಸೋಲಿನ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?

ಇತ್ತ ಪ್ರವಾಸಿ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಸೂಪರ್ ಓವರ್‌ನಲ್ಲಿ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದೀಗ ಈ ಎರಡು ತಂಡಗಳ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ. ಇಂದಿನ ಪಂದ್ಯಕ್ಕಾಗಿ ಉಭಯ ತಂಡಗಳ ಸಂಭವನೀಯ ತಂಡ ಇಲ್ಲಿದೆ.

ಇದನ್ನೂ ಓದಿ: 113 ರನ್‌ಗೆ ಆಲೌಟ್- 12ನೇ ಆವೃತ್ತಿಯಲ್ಲಿ RCBಗೆ ಹ್ಯಾಟ್ರಿಕ್ ಸೋಲು!

ಕಿಂಗ್ಸ್ ಇಲೆವೆನ್ ಪಂಜಾಬ್ ಸಂಭವನೀಯ ತಂಡ:
ಕೆ.ಎಲ್.ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್. ಮನ್ದೀಪ್ ಸಿಂಗ್, ಹಾರ್ಡಸ್ ವಿಲ್ಜೋನ್, ಆರ್ ಅಶ್ವಿನ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಆಂಡ್ರ್ಯೂ ಟೈ

ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ತಂಡ:
ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಐಯ್ಯರ್(ನಾಯಕ), ರಿಷಬ್ ಪಂತ್, ಕೊಲಿನ್ ಇನ್‌ಗ್ರಾಂ, ಹನುಮಾ ವಿಹಾರಿ, ಕ್ರಿಸ್ ಮೊರಿಸ್, ಸಂದೀಪ್ ಲಿಮ್ಚಾನೆ, ಕಾಗಿಸೋ ರಬಾಡ, ಹರ್ಶಲ್ ಪಟೇಲ್, ಅಮಿತ್ ಮಿಶ್ರಾ