ಹೈದರಾಬಾದ್: ಸನ್‌ರೈಸರ್ಸ್‌ ವಿರುದ್ಧ 118 ರನ್‌ಗಳ ಸೋಲುಂಡ ಬಳಿಕ ಹತಾಶರಾಗಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿದು ತಂಡದ ಹೀನಾಯ ಸೋಲುಗಳಲ್ಲಿ ಒಂದು ಎಂದಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ‘ಇದು ಹೀನಾಯ ಸೋಲುಗಳಲ್ಲಿ ಒಂದು. ನಾನು ಏನನ್ನೂ ವಿವರಿಸುವ ಸ್ಥಿತಿಯಲ್ಲಿಲ್ಲ. ಆರಂಭದಿಂದ ಕೊನೆ ವರೆಗೂ ಯಾವುದೂ ನಮಗೆ ಬೇಕಿದ್ದಂತೆ ನಡೆಯಲಿಲ್ಲ. ಎಲ್ಲಾ ವಿಭಾಗಗಳಲ್ಲೂ ಸನ್‌ರೈಸರ್ಸ್‌ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಿತು’ ಎಂದರು. ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಇರುವ ಗೊಂದಲದ ಬಗ್ಗೆಯೂ ಒಪ್ಪಿಕೊಂಡ ಕೊಹ್ಲಿ, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

113 ರನ್‌ಗೆ ಆಲೌಟ್- 12ನೇ ಆವೃತ್ತಿಯಲ್ಲಿ RCBಗೆ ಹ್ಯಾಟ್ರಿಕ್ ಸೋಲು!

ರಾಯಲ್ ಚಾಲೆಂಜರ್ಸ್ ಬೆಂಗಳೂರು-ಸನ್’ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್’ಸಿಬಿ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಆದರೆ ಕೊಹ್ಲಿ ನಿರ್ಧಾರ ತಲೆಕೆಳಗಾಗುವಂತೆ ಬ್ಯಾಟ್ ಬೀಸಿದ ಹೈದರಾಬಾದ್ ಆರಂಭಿಕರಾದ ಡೇವಿಡ್ ವಾರ್ನರ್, ಜಾನಿ ಬೇರ್’ಸ್ಟೋ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ 231 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಆರ್’ಸಿಬಿ ಕೇವಲ 113 ರನ್’ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.

IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದು, ಇದೀಗ ನಾಲ್ಕನೇ ಪಂದ್ಯವು ಏಪ್ರಿಲ್ 02ರಂದು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.