Asianet Suvarna News Asianet Suvarna News

113 ರನ್‌ಗೆ ಆಲೌಟ್- 12ನೇ ಆವೃತ್ತಿಯಲ್ಲಿ RCBಗೆ ಹ್ಯಾಟ್ರಿಕ್ ಸೋಲು!

ಐಪಿಎಲ್ 12ನೇ ಆವೃತ್ತಿ ಬಂದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಬದಲಾಗಿಲ್ಲ. ಸನ್ ರೈಸರ್ಸ್ ವಿರುದ್ಧ ಬೌಲರ್‌ಗಳು ದುಬಾರಿಯಾದರೆ, ಬ್ಯಾಟ್ಸ್‌ಮನ್‌ಗಳೆಲ್ಲಾ ಕೈಕೊಟ್ಟರು. ಹೀಗಾಗಿ RCB ಹೀನಾಯ ಸೋಲು ಅನುಭವಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.
 

IPL 2019 Sunrisers Hyderabad beat RCb by 118 runs
Author
Bengaluru, First Published Mar 31, 2019, 7:36 PM IST

ಹೈದರಾಬಾದ್(ಮಾ.31): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 232 ರನ್ ಟಾರ್ಗೆಟ್ ಪಡೆದ RCB, ಕೇವಲ 113 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ  118 ರನ್ ಸೋಲು ಅನುಭವಿಸಿದೆ. 

ಇದನ್ನೂ ಓದಿ: IPL 2019: ಬೈರ್‌ಸ್ಟೋ, ವಾರ್ನರ್ ಸೆಂಚುರಿ- RCBಗೆ 232 ರನ್ ಗುರಿ

ಗೆಲುವಿಗೆ 232 ರನ್ ಟಾರ್ಗೆಟ್ ಪಡೆದ RCB ಯಾವ ಹಂತದಲ್ಲೂ ಹೋರಾಟದ ಪ್ರದರ್ಶನ ನೀಡಲಿಲ್ಲ.  RCB ಶಿಮ್ರೊನ್ ಹೆಟ್ಮೆಯರ್ ಆರಂಭಿಕನಾಗಿ ಕಣಕ್ಕಿಳಿಸಿತು. ಇಂದು RCBಯಲ್ಲಿ ಬದಲಾವಣೆಯಾಗಿದೆ. ಗೆಲುವಿನ ಜೋಶ್ ತಂಡದಲ್ಲಿದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದೇ ಬಂತು. ಆದರೆ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಇಲ್ಲ.  ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳೆಲ್ಲಾ ಒಂದಂಕಿಗೆ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: 12ನೇ ಆವೃತ್ತಿ IPLನ ಮೊದಲ ಟೈ- ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ಪಾರ್ಥೀವ್ ಪಟೇಲ್, ಹೆಟ್ಮೆಯರ್, ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮೊಯಿನ್ ಆಲಿ, ಶಿವಂ ದುಬೆ ಸೇರಿದೆಂತೆ RCB ಘಟಾನುಘಟಿ ಬ್ಯಾಟ್ಸ್‌ಮನ್‌ಗಳೆಲ್ಲಾ ಕಣ್ಮುಚ್ಚಿ ತೆರೆಯೋದ್ರೊಳಗೆ ಔಟಾಗಿ ಪೆವಿಲಿಯನ್ ಸೇರಿದ್ದರು. RCB ಕೇವಲ 35 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು. ಸೋಲಿನ ಸುಳಿಗೆ ಸಿಲುಕಿತು.

ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ ಹಾಗೂ 16 ವರ್ಷಗ ಪ್ರಯಾಸ್ ರೇ ಬರ್ಮನ್ ಜೊತೆಯಾಟ RCB ಅಲ್ಪಮೊತ್ತದ ಆಲೌಟ್ ಭೀತಿಯಿಂದ ಪಾರು ಮಾಡಿತು. ಪ್ರಯಾಸ್ 19 ರನ್ ಸಿಡಿಸಿ ಔಟಾದರು. ಇನ್ನು ಗ್ರ್ಯಾಂಡ್‌ಹೊಮ್ಮೆ ಹಾಗೂ  ಉಮೇಶ್ ಯಾದವ್ 14 ರನ್ ಕಾಣಿಕೆ ನೀಡಿದರು. ಗ್ರ್ಯಾಂಡ್‌ಹೊಮ್ಮೆ 37 ರನ್ ಸಿಡಿಸಿ RCB ಅಲ್ಪಮೊತ್ತಕ್ಕೆ ಆಲೌಟ್ ಆಗೋದನ್ನು ತಪ್ಪಿಸಿದರು. ಯಜುವೇಂದ್ರ ಚೆಹಾಲ್ ವಿಕೆಟ್ ಪತನದೊಂದಿಗೆ RCB 19.5 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ SRH 118 ರನ್ ಭರ್ಜರಿ ಗೆಲುವು ಸಾಧಿಸಿತು.

Follow Us:
Download App:
  • android
  • ios