ಮುಂಬೈ(ಏ.24): 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಹಲವು ವಿಘ್ನ ಎದುರಿಸಿದ ಬಿಸಿಸಿಐ ಕೊನೆಗೂ ಟೂರ್ನಿ ಆಯೋಜಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿ ರೋಚಕ ಘಟ್ಟ ತಲುಪುತ್ತಿದ್ದಂತೆ ಇದೀಗ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಸಂಕಷ್ಟ ಎದುರಾಗಿದೆ. ವಾಂಖೆಡೆ ಕ್ರೀಡಾಂಗಣದ ಸಮಸ್ಯೆ ಇದೀಗ ಮುಂಬೈ ಇಂಡಿಯನ್ಸ್ ತಂಡದ ಚಿಂತೆಗೆ ಕಾರಣವಾಗಿದೆ.

ಇದನ್ನೂ ಓದಿ: ಮಹಿಳಾ ಐಪಿಎಲ್‌ 2019: ತಂಡದ ನಾಯಕಿಯರ ಪಟ್ಟಿ ಪ್ರಕಟ!

ಬಾಕಿ ಉಳಿಸಿ ಕೊಂಡಿರುವ 120 ಕೋಟಿ ಹಣವನ್ನು ಪಾವತಿ ಮಾಡಿ ಇಲ್ಲವೇ ವಾಂಖೇಡೆ ಕ್ರೀಡಾಂಗಣ ತೆರವು ಮಾಡಿ ಎಂದು ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ)ಗೆ ಮಹಾರಾಷ್ಟ್ರ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಮುಂಬೈ ಜಿಲ್ಲಾಧಿಕಾರಿ ಶಿವಾಜಿ ಅವರಿಂದ ಏ.16ರಂದು ನೋಟಿಸ್‌ ಜಾರಿಯಾಗಿದ್ದು, ಮೇ 3ರಂದು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಲಾಗಿದೆ. 

ಇದನ್ನೂ ಓದಿ: ಲೋಕಸಭಾ ಚುನಾವಣೆ 2019: ನಾಮಪತ್ರ ಸಲ್ಲಿಸಿದ ಕ್ರಿಕೆಟಿಗ ಗೌತಮ್ ಗಂಭೀರ್!

ವಾಂಖೇಡೆ ಕ್ರೀಡಾಂಗಣವನ್ನು 50 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಒಪ್ಪಂದ ಈ ವರ್ಷ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದೆ. ಕ್ರೀಡಾಂಗಣದ ಅಳತೆ 52,597 ಯಾರ್ಡ್‌ ಇದ್ದು, ಪ್ರತಿ ಯಾರ್ಡ್‌ಗೆ ಪ್ರತಿ ತಿಂಗಳಿಗೆ .1 ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ ವಾಂಖೇಡೆ ಆವರಣದಲ್ಲಿ ಬಿಸಿಸಿಐ ಪ್ರಧಾನ ಕಚೇರಿ ನಿರ್ಮಿಸಿದ ಕಾರಣ, ಬಾಡಿಗೆ ಮೊತ್ತ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.