ಮುಂಬೈ(ಮಾ.12): ಇಂಜುರಿಗೆ ತುತ್ತಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್ ತರಬೇತಿ ಶಿಬಿರಕ್ಕೆ ಹಾಜರಾಗಿದ್ದಾರೆ. ಈ ಮೂಲಕ ಮುಂಬೈ 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ಧೋನಿಗೆ ಚಾಲೆಂಜ್ - ಯುವಿ ಹೆಲಿಕಾಪ್ಟರ್ ಸಿಕ್ಸರ್ ವೈರಲ್!

ಹಾರ್ದಿಕ್ ಸದ್ಯ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ವಿಶ್ರಾಂತಿಗೆ ಜಾರಿದ್ದ ಹಾರ್ದಿಕ್ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಸಾಬೀತು ಪಡಿಸಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ತರಬೇತಿ ಶಿಬಿರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್ 2019: ಮುಂಬೈ ಇಂಡಿಯನ್ಸ್ ತಂಡದ 4 ಅನ್‌ಲಕ್ಕಿ ಆಟಗಾರರು!

ಮುಂಬೈ ಇಂಡಿಯನ್ಸ್ ಶಿಬಿರದಲ್ಲಿ ಹಾರ್ದಿಕ್ ಪಾಂಡ್ಯ ಸಹೋದರ ಕ್ರುನಾಲ್ ಪಾಂಡ್ಯ, ಜಯಂತ್ ಯಾದವ್, ರಾಹುಲ್ ಚಹಾಲ್, ಬರೀಂದರ್ ಸ್ರಾನ್, ರಸಿಕ್ ಸಲಾಮ್, ಮಿಚೆಲ್ ಮೆಕ್ಲೆನಾಘನ್ ಹಾಗೂ ಇಶಾನ್ ಕಿಶನ್ ಅಭ್ಯಾಸ ಆರಂಭಿಸಿದ್ದಾರೆ.  ಮಾರ್ಚ್ 23 ರಿಂದ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ.