ಮುಂಬೈ(ಮಾ.11): ಮುಂಬೈ ಇಂಡಿಯನ್ಸ್ ತಂಡದ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳೋ ಲೆಕ್ಕಾಚಾರದಲ್ಲಿರುವ ಯುವರಾಜ್ ಸಿಂಗ್ ಇದೀಗ ಎಂ.ಎಸ್.ಧೋನಿಗೆ ಚಾಲೆಂಜ್ ಹಾಕಿದ್ದಾರೆ. ಧೋನಿ ರೀತಿ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಐಪಿಎಲ್ 2019: ನಗಿಸಲು ಬರ್ತಿದ್ದಾರೆ RCB ತಂಡದ Mr.ನ್ಯಾಗ್ಸ್!

ಮುಂಬೈ ಇಂಡಿಯನ್ಸ್ ತಂಡದ ನೆಟ್ ಪ್ರಾಕ್ಟೀಸ್‌ನಲ್ಲಿ ಯುವರಾಜ್ ಸಿಂಗ್ ಧೋನಿ ರೀತಿ ಹೆಲಿಕಾಪ್ಟರ್ ಸಿಕ್ಸರ್ ಭಾರಿಸಿದ್ದಾರೆ. ಎಂ.ಎಸ್.ಧೋನಿ ರೀತಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಡೇವಿಡ್ ವಾರ್ನರ್, ಮೊಹಮ್ಮದ್ ಶೆಹಝಾದ್ ಸೇರಿದಂತೆ ಕೆಲ ಕ್ರಿಕೆಟಿಗರು ಹೆಲಿಕಾಪ್ಟರ್ ಸಿಕ್ಸರ್ ಬಾರಿಸಿದ್ದಾರೆ. ಇದೀಗ ಯುವರಾಜ್ ಸಿಂಗ್ ಕೂಡ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿದ್ದಾರೆ.

ಇದನ್ನೂ ಓದಿ: ಯುವರಾಜ್ ಸಿಂಗ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ಮುಂಬೈ ಇಂಡಿಯನ್ಸ್!

2019ರ ಐಪಿಎಲ್ ಹರಾಜಿನ ಮೊದಲ ಹಂತದಲ್ಲಿ ಹರಾಜಾಗದೆ ಉಳಿದಿದ್ದ ಯುವಿಯನ್ನು ಅಂತಿಮ ಹಂತದಲ್ಲಿ ಮುಂಬೈ ಇಂಡಿಯನ್ಸ್ ಮೂಲ ಬೆಲೆ 1 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.  ಇದೀಗ ಸಿಕ್ಸರ್ ಸಿಡಿಸೋ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸೋದಾಗಿ ಸೂಚನೆ ನೀಡಿದ್ದಾರೆ.