ಐಪಿಎಲ್ 2019: ಮುಂಬೈ ಇಂಡಿಯನ್ಸ್ ತಂಡದ 4 ಅನ್‌ಲಕ್ಕಿ ಆಟಗಾರರು!

ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಸೇರಿದಂತೆ ದಿಗ್ಗಜ ಆಟಗಾರರು ಮುಂಬೈ ತಂಡದಲ್ಲಿ ಮಿಂಚಿದ್ದಾರೆ. ರೋಹಿತ್ ಶರ್ಮಾ, ಲಸಿತ್ ಮಲಿಂಗ ಸೇರಿದಂತೆ ಬಹುತೇಕ ಎಲ್ಲಾ ಕ್ರಿಕೆಟಿಗರು ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಆದರೆ ನಾಲ್ವರು ಕ್ರಿಕೆಟಿಗರು ಮಾತ್ರ ಅನ್ ಲಕ್ಕಿ ಆಟಗಾರ ಹಣೆಪಟ್ಟಿ  ಹೊತ್ತುಕೊಂಡಿದ್ದಾರೆ.

Mumbai Indians 4 Unlucky players in the history of IPL cricket

ಮುಂಬೈ(ಮಾ.06): ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿ ತಂಡ. 11 ಆವೃತ್ತಿಗಳಲ್ಲಿ 4 ಬಾರಿ ಫೈನಲ್ ಪ್ರವೇಶಿಸಿರುವ ಮುಂಬೈ, 3 ಟ್ರೋಫಿ ಗೆದ್ದುಕೊಂಡಿದೆ. ಇದೀಗ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಸನತ್ ಜಸೂರ್ಯ ಸೇರಿದಂತ ದಿಗ್ಗಜ ಆಟಗಾರರು ಆಡಿದ್ದಾರೆ. ಆದರೆ ಇದೇ ತಂಡದಲ್ಲಿ ಆಡಿ ಅನ್ ಲಕ್ಕಿ ಎನಿಸಿಕೊಂಡವರು ಇದ್ದಾರೆ.

ಇದನ್ನೂ ಓದಿ: ಯುವರಾಜ್ ಸಿಂಗ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ಮುಂಬೈ ಇಂಡಿಯನ್ಸ್!

11 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 4 ಅನ್ ಲಕ್ಕಿ ಆಟಗಾರರನ್ನು ಹೊಂದಿತ್ತು. ಮುಂಬೈ ತಂಡದಲ್ಲಿ ಕಳಪೆ ಪ್ರದರ್ಶನದ ಮೂಲಕ ಮೂಲೆಗುಂಪಾಗಿದ್ದ ಈ ಕ್ರಿಕೆಟಿಗರು ಮುಂಬೈ ತೊರೆದ ಬಳಿಕ ಮಿಂಚಿದರು. ಈ ನಾಲ್ವರು ಕ್ರಿಕೆಟಿಗರ ವಿವರ ಇಲ್ಲಿದೆ.

ಯಜುವೇಂದ್ರ ಚೆಹಾಲ್
ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಯಜುವೇಂದ್ರ ಚೆಹಾಲ್ ಮಿಂಚಿನ ಪ್ರದರ್ಶನ ನೀಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ. ಆದರೆ ಚಹಾಲ್ ಆರ್‌ಸಿಬಿ ತಂಡಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು. ಆದರೆ ಕಳಪೆ ಪ್ರದರ್ಶನ ನೀಡೋ ಮೂಲಕ ತಂಡದಿಂದಲೇ ಹೊರಬಿದ್ದಿದ್ದರು.

ಇದನ್ನೂ ಓದಿ: IPL 2019: ಆರ್‌ಸಿಬಿ ತಂಡದಲ್ಲಿರುವ ಹಿರಿಯ ಹಾಗೂ ಕಿರಿಯ ಕ್ರಿಕೆಟಿಗ!

ಗ್ಲೆನ್ ಮ್ಯಾಕ್ಸ್‌ವೆಲ್
ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ 2013ರಲ್ಲಿ ಮುಂಬೈ ತಂಡದ ಪರ ಆಡಿದ್ದರು. ಆದರೆ ಮುಂಬೈ ತಂಡ ಬಲಿಷ್ಠ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್‌ಗಳಿಂದ ಮ್ಯಾಕ್ಸ್‌ವೆಲ್ ಅವಕಾಶ ವಂಚಿತರಾದರು. ಕೇವಲ 3 ಪಂದ್ಯದಲ್ಲಿ ಅವಕಾಶ ಸಿಕ್ಕಿದರೂ ಮ್ಯಾಕ್ಸ್‌ವೆಲ್ 36 ರನ್ ಸಿಡಿಸಿ ನಿರಾಸೆ ಮೂಡಿಸಿದ್ದರು. ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮಿಂಚಿದರು.

ಧವಲ್ ಕುಲಕರ್ಣಿ
ದೇಸಿ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಧವಲ್ ಕುಲಕರ್ಣಿ ಐಪಿಎಲ್‌ನ ಆರಂಭಿಕ 6 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರತಿನಿಧಿಸಿದ್ದರು. ಆದರೆ ಜಹೀರ್ ಖಾನ್, ಆಶಿಶ್ ನೆಹ್ರಾ, ಲಸಿತ್ ಮಲಿಂಗ ಸೇರಿದಂತೆ ದಿಗ್ಗಜ ಬೌಲರ್‌ಗಳಿಂದ ಧವಲ್ ಕುಲಕರ್ಣಿಗೆ ಅವಕಾಶವೇ ಸಿಗಲಿಲ್ಲ. ಹೀಗಾಗಿ ತಂಡದಿಂದಲೇ ಹೊರನಡೆದರು.

ಇದನ್ನೂ ಓದಿ: ಸೆಕ್ಯೂರಿಟಿ ಕಣ್ತಪ್ಪಿಸಿ ಒಳ ನುಗ್ಗಿದ ಅಭಿಮಾನಿ ಜೊತೆ ಧೋನಿ ಫನ್!

ಅಜಿಂಕ್ಯ ರಹಾನೆ
ಆರಂಭಿಕ 3 ಆವೃತ್ತಿಗಳಲ್ಲಿ ಅಜಿಂಕ್ಯ ರಹಾನೆ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ಸನತ್ ಜಯಸೂರ್ಯ ಆರಂಭಿಕ ಸ್ಥಾನ ತುಂಬಿದ್ದರು. ಹೀಗಾಗಿ ರಹಾನೆಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಿದ್ದರೂ ಫಲಿಸಲಿಲ್ಲ. 2011ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಕಣಕ್ಕಿಳಿದ ಮೇಲೆ ರಹಾನೆ ಅಬ್ಬರಿಸಿದರು.

Latest Videos
Follow Us:
Download App:
  • android
  • ios