Asianet Suvarna News Asianet Suvarna News

ರಿಷಬ್ ಪಂತ್ ಅಬ್ಬರದಿಂದ ದಿನೇಶ್ ಕಾರ್ತಿಕ್‌ಗೆ ಶುರುವಾಯ್ತು ಟೆನ್ಶನ್!

ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್‌ ತಲೆನೋವು ಹೆಚ್ಚಿಸಿದೆ.  ಪಂತ್ ಅಬ್ಬರದಿಂದ ಕಾರ್ತಿಕ್‌ಗೆ ಟೆನ್ಶನ್ ಶುರುವಾಗಿದ್ದು ಹೇಗೆ? ಇಲ್ಲಿದೆ ವಿವರ

IPL 2019 Dinesh karthik worried about world cup spot after Rishabh pant performance
Author
Bengaluru, First Published Mar 26, 2019, 2:06 PM IST

ದೆಹಲಿ(ಮಾ.26): ಐಪಿಎಲ್ 12ನೇ ಆವೃತ್ತಿಯ ಒಂದೇ ಇನ್ನಿಂಗ್ಸ್‌ನಲ್ಲಿ ವಿಶ್ವದ  ಗಮನಸೆಳೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಇದೀಗ CSK ವಿರುದ್ದದ ಪಂದ್ಯಕ್ಕೆ ಸಜ್ಜಾಗಿದ್ದಾರರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂತ್ 27 ಎಸೆತದಲ್ಲಿ 78 ರನ್ ಚಚ್ಚಿದ್ದರು.

ಇದನ್ನೂ ಓದಿ: 27 ಎಸೆತ, 7 ಸಿಕ್ಸರ್, 7 ಬೌಂಡರಿ, 78 ರನ್- ಇದು ಪಂತ್ ಅಬ್ಬರ!

7 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿರುವ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಪಂತ್ ಸ್ಫೋಟಕ ಬ್ಯಾಟಿಂಗ್ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್‌ಗೆ ತಲೆನೋವು ಹೆಚ್ಚಿಸಿದೆ. ಪಂತ್ ಐಪಿಎಲ್ ಎದುರಾಳಿ ಅನ್ನೋ ಕಾರಣಕ್ಕೆ ಕಾರ್ತಿಕ್ ತಲೆಕೆಡಿಸಿಕೊಂಡಿಲ್ಲ, ಬದಲಾಗಿ ಪಂತ್ ಅಬ್ಬರಿದಿಂದ 2019ರ ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಬ್ಯಾಕ್ಅಪ್ ವಿಕೆಟ್ ಕೀಪರ್ ಸ್ಥಾನ ಕೈತಪ್ಪೋ ಸಾಧ್ಯತೆ ಇದೆ.

"

ಇದನ್ನೂ ಓದಿ: 'ಕೊಹ್ಲಿ ಕೋಪ ಕಂಡರೆ ಭಯವಾಗುತ್ತೆ': ಇದು ಸ್ಟಾರ್ ವಿಕೆಟ್ ಕೀಪರ್ ಮಾತು..!

2019ರ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸುತ್ತಿದೆ. ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಬ್ಯಾಕ್ಅಪ್ ಆಗಿ ಮತ್ತೊರ್ವ ವಿಕೆಟ್ ಕೀಪರ್ ಆಯ್ಕೆಯಾಗೋ ಸಾಧ್ಯತೆ ಇದೆ. ಇಷ್ಟು ದಿನ ದಿನೇಶ್ ಕಾರ್ತಿಕ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಪಂತ್ ಸ್ಫೋಟಕ ಬ್ಯಾಟಿಂಗ್ ಬಳಿಕ ಕಾರ್ತಿಕ್ ಬದಲು ಪಂತ್ ಹೆಸರು ಕೇಳಿಬರುತ್ತಿದೆ.
 

Follow Us:
Download App:
  • android
  • ios