ಮುಂಬೈ(ಮಾ.24):  ಎಸೆತ 27, 7 ಸಿಕ್ಸರ್, 7 ಬೌಂಡರಿ, ಅಜೇಯ 78 ರನ್. ಇದು ಡೆಲ್ಲಿ ಕ್ಯಾಪಿಟಲ್ಸ್  ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅಬ್ಬರಿಸಿದ ರೀತಿ. ಮುಂಬೈ ಇಂಡಿಯನ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ಪಂತ್ ಅಬ್ಬರಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.

ಇದನ್ನೂ ಓದಿ: IPL 2019: ಪಂತ್ ಸುಂಟರಗಾಳಿ - ಮುಂಬೈಗೆ 214 ರನ್ ಟಾರ್ಗೆಟ್!

ಕೇವಲ 18 ಎಸೆತದಲ್ಲಿ ಅರ್ಧಶತಕ ಪೂರೈಸೋ ಮೂಲಕ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಡೆಲ್ಲಿ ತಂಡದ 2ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕ್ರಿಸ್ ಮೊರಿಸ್ 17 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು.

ಇದನ್ನೂ ಓದಿ: IPL 2019: ಮುಂಬೈ VS ಡೆಲ್ಲಿ ಪಂದ್ಯಕ್ಕೆ ವಿಶೇಷ ಅತಿಥಿ!

18 ಎಸೆತದಲ್ಲಿ ಅರ್ಧಶತಕ ಸಿಡಿಸೋ ಮೂಲಕ ಪಂತ್, ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸಮನ್ ಎಂ.ಎಸ್.ಧೋನಿ ದಾಖಲೆಯನ್ನು ಮುರಿದಿದ್ದಾರೆ. 2012ರಲ್ಲಿ ಎಂ.ಎಸ್.ಧೋನಿ ಮುಂಬೈ ವಿರುದ್ಧ 20 ಎಸೆದಲ್ಲಿ ಅರ್ಧಶತಕ ಸಿಡಿಸಿದ್ದರು.