ನವದೆಹಲಿ(ಮಾ.26): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು(ಮಾ.26) ಮುಖಾಮುಖಿಯಾಗುತ್ತಿದೆ. CSK ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ವಿರುದ್ಧ ಘರ್ಜಿಸಿತ್ತು.

ಇದನ್ನೂ ಓದಿ: ಚೆನ್ನೈ ಹಿರಿಯರಿಗೆ ಡೆಲ್ಲಿ ಯುವಕರ ಸವಾಲು!

ಗೆಲುವಿನೊಂದಿಗೆ 2ನೇ ಪಂದ್ಯ ಆಡುತ್ತಿರುವ ಉಭಯ ತಂಡಗಳ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಮುಂಬೈ ವಿರುದ್ಧ ಡೆಲ್ಲಿ ತಂಡ ರಿಷಬ್ ಪಂತ್ ಅಬ್ಬರಿಸಿದ್ದರೆ, RCB ವಿರುದ್ಧ CSK ತಂಡ ಸ್ಪಿನ್ನರ್‌ಗಳಾಜ ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಮೋಡಿ ಮಾಡಿದ್ದರು. ಇದೀಗ ದೆಹಲಿ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಯಾರು ಹೀರೋ ಆಗ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಇದೀಗ ಕೋಟ್ಲಾ ಹೋರಾಟಕ್ಕೆ ಉಭಯ ತಂಡಗಳ ಸಂಭವನೀಯ ತಂಡ ಇಲ್ಲಿದೆ.

ಇದನ್ನೂ ಓದಿ: ಮತ್ತೆ ಮನೆಗೆ ಹೋಗೋ ಪ್ಲಾನ್ ಇದೆಯಾ? ಕೇದಾರ್ ಟ್ರೋಲ್ ಮಾಡಿ ಧೋನಿ!

ದೆಹಲಿ ಸಂಭವನೀಯ ತಂಡ:
ಶ್ರೇಯಸ್ ಅಯ್ಯರ್(ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಕೊಲಿನ್ ಇನ್‌ಗ್ರಾಂ, ರಿಷಬ್ ಪಂತ್,  ಕೀಮೋ ಪೌಲ್, ಅಕ್ಸರ್ ಪಟೇಲ್, ರಾಹುಲ್ ಟಿವಾಟಿಯಾ, ಕಾಗಿಸೋ ರಬಾಡ, ಟ್ರೆಂಟ್ ಬೋಲ್ಟ್, ಇಶಾಂತತ್ ಶರ್ಮಾ, 

CSK ಸಂಭವನೀಯ ತಂಡ:
ಎಂ.ಎಸ್.ಧೋನಿ(ನಾಯಕ),  ಶೇನ್ ವಾಟ್ಸನ್, ಸುರೇಶ್ ರೈನಾ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್, ದೀಪಕ್ ಚಹಾರ್, ಇಮ್ರಾನ್ ತಾಹೀರ್, ಶಾರ್ದೂಲ್ ಠಾಕೂರ್