ಚೆನ್ನೈ( ಮಾ.25): ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ದೆಹಲಿಯಲ್ಲಿ ಬೀಡುಬಿಟ್ಟಿದೆ. RCB ವಿರುದ್ಧದ ಗೆಲುವಿನ ಬಳಿಕ ಎಂ.ಎಸ್.ಧೋನಿ, ಟೀಮ್ ಮೇಟ್ ಕೇದಾರ್ ಜಾಧವ್ ಟ್ರೋಲ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: 6 ಭಾಷೆಯಲ್ಲಿ ಧೋನಿ -ಪುತ್ರಿ ಝಿವಾ ಮಾತುಕತೆ - ವೈರಲ್ ಆಯ್ತು ವೀಡಿಯೋ!

ಹಾಸ್ಯ ಪ್ರಜ್ಞೆ ಹಾಗೂ ತಕ್ಕ ಉತ್ತರ ನೀಡೋದರಲ್ಲಿ ಧೋನಿ ಎತ್ತಿದ ಕೈ. ಸಿಕ್ಕ ಅವಕಾಶಗಳಲ್ಲಿ ಧೋನಿ ಹಾಸ್ಯ ಚಟಾಕಿಯಿಂದಲೇ ಆಟಗಾರರಿಗೆ ವಿಷಯ ಮುಟ್ಟಿಸುತ್ತಾರೆ. RCB ವಿರುದ್ಧದ ಪಂದ್ಯದ ಬಳಿಕ  CSK ತಂಡ, ದೆಹಲಿ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಮೊದಲ ಗೆಲುವಿನ ಕುರಿತು ಆಟಗಾರರಲ್ಲಿ ವೇಗಿ ಮೋಹಿತ್ ಶರ್ಮಾ ಪ್ರಶ್ನೆ ಕೇಳಿದ್ದರು.

ಮೊದಲು ಕೇದಾರ್ ಜಾಧವ್ ಬಳಿ ಈ ಪ್ರಶ್ನೆ ಕೇಳಲಾಯ್ತು. ಈ ವೇಳೆ ಕೇದಾರ್ 2018ರಲ್ಲೂ ಆರಂಭಿಕ ಪಂದ್ಯದಲ್ಲಿ ನಾನು ತಂಡದಲ್ಲಿದ್ದೆ. ಈ ವೇಳೆ ಮುಂಬೈ ತಂಡವನ್ನು ಮಣಿಸಿದ್ದೇವು. ಇದೀಗ RCB ವಿರುದ್ಧದ ಮೊದಲ ಪಂದ್ಯದಲ್ಲೂ ನಾನಿದ್ದೆ. ಈಗಲೂ ಗೆಲುವು ಸಾಧಿಸಿದ್ದೇವೆ ಎಂದರು. ತಕ್ಷಣವೇ ಧೋನಿ ಹಾಗಾದರೆ ಮತ್ತೆ ಮನೆಗೆ ಹೋಗೋ ಪ್ಲಾನ್ ಇದೆಯಾ ಎಂದು ಕೇದಾರ್ ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ರಸೆಲ್!

ಧೋನಿ ಈ ರೀತಿ ಟ್ರೋಲ್ ಮಾಡಲು ಕಾರಣವೂ ಇದೆ. 2018ರ ಮೊದಲ ಪಂದ್ಯದಲ್ಲಿ ಆಡಿದ್ದ ಕೇದಾರ್ ಜಾಧವ್ ಬಳಿಕ ಇಂಜುರಿಗೆ ತುತ್ತಾಗಿ  ಸಂಪೂರ್ಣ ಟೂರ್ನಿಯಿಂದ ಹೊರಗುಳಿದಿದ್ದರು. ಇದೇ ಕಾರಣಕ್ಕೆ ಧೋನಿ, ಈ ಬಾರಿಯೂ ಮತ್ತೆ ಮನೆಗೋ ಹೋಗೋ ಪ್ಲಾನ್ ಇದೆಯಾ ಎಂದು ಕೇಳಿ ಎಂದಿದ್ದಾರೆ.