ಮೊಹಾಲಿ(ಏ.12): ಸತತ 6 ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಗೆಲುವಿಗಾಗಿ ಹೊಸ ತಂತ್ರ ಮಾಡಿದೆ. ತಂಡದ ವೀಕ್ನೆಸ್ ಸರಿಪಡಿಸಲು ಮುಂದಾಗಿರುವ RCB, ಸೌತ್ಆಫ್ರಿಕಾ ವೇಗಿ ಡೇಲ್ ಸ್ಟೇನ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ.

ಇದನ್ನೂ ಓದಿ: ’WelCome’: RCB ಹೀಗೆ ಟ್ವೀಟ್ ಮಾಡಿದ್ದೇಕೆ..?

ಕಿಂಗ್ಸ್ ಇಲೆವೆನ್  ಪಂಜಾಬ್ ವಿರುದ್ಧದ ಪಂದ್ಯಕ್ಕಾಗಿ RCB ತಂಡ ಸದ್ಯ ಮೊಹಾಲಿಯಲ್ಲಿದೆ. ಈಗಾಗಲೇ ಸೋಲಿನಿಂದ  ಕಂಗೆಟ್ಟಿರುವ RCB ತಂಡ ಗೆಲುವಿಗಾಗಿ ಕೊನೆಯ ಪ್ರಯತ್ನಕ್ಕೆ ಮುಂದಾಗಿದೆ. ಇದರ ಮೊದಲ ಅಂಗವಾಗಿ ಡೇಲ್ ಸ್ಟೇನ್ ತಂಡ ಕೂಡಿಕೊಂಡಿದ್ದಾರೆ. ಡೇಲ್ ಸ್ಟೇನ್ 2008ರಿಂದ 2010ರ ವರೆಗೆ RCB ತಂಡದಲ್ಲಿ ಆಡಿದ್ದರು. ಇದೀಗ ಮತ್ತೆ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.ಶೀಘ್ರದಲ್ಲೇ ಸ್ಟೇನ್  ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದಿದ್ದಾರೆ. ಇಷ್ಟೇ ಅಲ್ಲ, ಮತ್ತೆ RCB ತಂಡ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

 

 

ಇದನ್ನೂ ಓದಿ: RCB ಸತತ ಸೋಲು- ಕೊಹ್ಲಿ ಬೆಂಬಲ ನಿಂತ ಆಸಿಸ್ ಕ್ರಿಕೆಟಿಗ!

RCB ವೇಗಿ ನಥನ್ ಕೌಲ್ಟರ್ ಇಂಜುರಿಯಾಗಿದ್ದಾರೆ. ನೈಲ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ನೈಲ್ ಬದಲು ಇದೀಗ ಡೇಲ್ ಸ್ಟೇನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 2008 ರಿಂದ 2016ರ ವರೆಗೆ ಸತತ ಐಪಿಎಲ್ ಟೂರ್ನಿ ಆಡಿದ ಸ್ಟೇನ್ ಕಳೆದರಡು ಆವೃತ್ತಿಯಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್ ಟೂರ್ನಿಯಲ್ಲಿ 90 ಪಂದ್ಯ ಆಡಿರುವ ಸ್ಟೇನ್, 92 ವಿಕೆಟ್ ಉರುಳಿಸಿದ್ದಾರೆ. ಡೇಲ್ ಸ್ಟೇನ್ ಆಗಮನದಿಂದ RCB ಹಣೆಬರಹ ಬದಲಾಗುತ್ತಾ? ಶೀಘ್ರದಲ್ಲೇ ಉತ್ತರ ಸಿಗಲಿದೆ.