ಮೊಹಾಲಿ(ಏ.12): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸತತ ಸೋಲಿಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಸೋಲಿಗೆ ನಾಯಕತ್ವವೇ ಕಾರಣ ಅನ್ನೋ ವಾದ ಒಂದಡೆಯಾದರೆ, ಕೊಹ್ಲಿಗೆ ವಿಶ್ರಾಂತಿ ನೀಡಿ ಅನ್ನೋ ವಾದ ಮತ್ತೊಂದಂಡೆ. ಆದರೆ ಪ್ರತಿ ಪಂದ್ಯದ ಬಳಿಕ ಕೊಹ್ಲಿ ನಾಯಕತ್ವದ ಕುರಿತು ಅಪಸ್ವರ ಕೇಳಿಬರುತ್ತಿದೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲು ಕೊಹ್ಲಿಗೆ ಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ: RCB ತಂಡಕ್ಕೆ ಆಫ್ರಿಕಾ ವೇಗಿ ಡೇಲ್‌ ಸ್ಟೈನ್‌ ಎಂಟ್ರಿ?

ಆಸಿಸ್ ಕ್ರಿಕೆಗ ಬ್ರಾಡ್ ಹಾಗ್, ನಾಯಕ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. RCB ತಂಡ ಸಂಪೂರ್ಣವಾಗಿ ಕೊಹ್ಲಿಯನ್ನು ಅವಲಂಬಿತವಾಗಿದೆ. ಹೀಗಾಗಿ ಸೋಲು ಅನುಭವಿಸಿತ್ತಿದೆ. ಆದರೆ ಈ ಪ್ರದರ್ಶನ ನಾಯಕ ವಿರಾಟ್ ಕೊಹ್ಲಿಯ ವಿಶ್ವಕಪ್ ಪ್ರದರ್ಶನ ಹಾಗೂ ನಾಯಕತ್ವಕ್ಕೆ ಯಾವುದೇ ತೊಡಕಾಗುವುದಿಲ್ಲ ಎಂದು ಹಾಗ್ ಹೇಳಿದ್ದಾರೆ.

ಇದನ್ನೂ ಓದಿ: ಸಿಕ್ಸರ್ ಬಾರಿಸಿದ ಜಡೇಜಾ ತಲೆ ಮೇಲೆ ಹೊಡೆದ ಧೋನಿ!

RCB ಡೆತ್ ಓವರ್‌ನಲ್ಲಿ ಸಮಸ್ಯೆ ಎದುರಿಸುತ್ತಿದೆ. ಬೌಲರ್‌ಗಳು ಪರಿಣಾಮಕಾರಿಯಾಗುತ್ತಿಲ್ಲ. ಇತ್ತ  ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುತ್ತಿಲ್ಲ ಎಂದು ಹಾಗ್ ಹೇಳಿದ್ದಾರೆ. ಬ್ರಾಡ್ ಹಾಗ್ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.