ಸತತ 6 ಸೋಲುಗಳಿಂದ ಬಳಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಆಟಗಾರನ ಸೇರ್ಪಡೆ ಖಚಿತ ಎನ್ನುವಂತಿದೆ ವಿರಾಟ್ ಪಡೆಯ ಈ ಟ್ವೀಟ್. ಅಷ್ಟಕ್ಕೂ 'Welcome' ಮಾಡಿದ್ದು ಯಾರಿಗೆ ಎನ್ನುವುದನ್ನು ನೀವೇ ನೋಡಿ...
ಬೆಂಗಳೂರು[ಏ.12]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲವೇ ನಿಮಿಷಗಳ ಹಿಂದೆ ಟ್ವಿಟರ್’ನಲ್ಲಿ 'Welcome' ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
RCB ತಂಡಕ್ಕೆ ಆಫ್ರಿಕಾ ವೇಗಿ ಡೇಲ್ ಸ್ಟೈನ್ ಎಂಟ್ರಿ?
12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 6 ಸೋಲು ಕಂಡಿರುವ ವಿರಾಟ್ ಪಡೆ ಪ್ಲೇ ಆಫ್ ಹಂತ ಪ್ರವೇಶಿಸಬೇಕಿದ್ದರೆ, ಉಳಿದ 8 ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಮಾರಕ ವೇಗಿ ಡೇಲ್ ಸ್ಟೇನ್ RCB ತಂಡ ಕೂಡಿಕೊಳ್ಳಿದ್ದಾರೆ ಎನ್ನುವ ಗಾಳಿಸುದ್ದಿಯೂ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ RCB ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ’ವೆಲ್’ಕಮ್’ ಪೋಸ್ಟ್ ಹಾಕಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನಾಥನ್ ಕೌಲ್ಟರ್’ನೀಲ್ ಬದಲಿಗೆ ಸ್ಟೇನ್ ತಂಡ ಸೇರಿಕೊಳ್ಳಿದ್ದಾರೆ ಎನ್ನುವುದನ್ನು RCB ತಂಡ ಇನ್ನಷ್ಟೇ ಖಚಿತಪಡಿಸಬೇಕಿದೆ.
ಈ ಮೊದಲು ಡೇಲ್ ಸ್ಟೇನ್ 2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಕೂಡಿಕೊಂಡಿದ್ದರು. ತದನಂತರದಲ್ಲಿ ಸನ್’ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
