ಮುಂಬೈ(ಏ.14): ರಾಜಸ್ಥಾನ ರಾಯಲ್ಸ್ ವಿರುದ್ದ ಸೋಲಿನ ಶಾಕ್ ಅನುಭವಿಸಿರುವ ಮುಂಬೈ ಇಂಡಿಯನ್ಸ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೋರಾಟ ನಡೆಸಲು ಸಜ್ಜಾಗಿದೆ. ಪ್ರಮುಖ ಪಂದ್ಯಕ್ಕೂ ಮುನ್ನು ಮುಂಬೈ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

ಇದನ್ನೂ ಓದಿ: IPL 2019: ಸೋಲಿನಿಂದ ಹೊರಬಂದ ರಾಜಸ್ಥಾನ- ಮುಂಬೈಗೆ ತವರಿನಲ್ಲಿ ಶಾಕ್!

ಮುಂಬೈ ತಂಡದ ಫ್ರಂಟ್ ಲನ್ ಬೌಲರ್ ಅಲ್ಜಾರಿ ಜೊಸೆಫ್ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಭುಜದ ನೋವಿಗೆ ತುತ್ತಾಗಿರುವ ಜೊಸೆಫ್‌ಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಇನ್ನುಳಿದ ಐಪಿಎಲ್ ಪಂದ್ಯಗಳಿಗೆ ಜೊಸೆಫ್ ಅಲಭ್ಯರಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: IPL 2019: ರೈನಾ-ಜಡೇಜಾ ಹೋರಾಟ- ಗೆಲುವಿನ ಕೇಕೆ ಹಾಕಿದ CSK

ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಡೈವ್ ಮಾಡೋ ವೇಳೆ ಭುಜ ಗಾಯಗೊಂಡಿತ್ತು. ಮುಂಬೈ ಇಂಡಿಯನ್ಸ್  7 ಪಂದ್ಯದಲ್ಲಿ 4 ರಲ್ಲಿ ಗೆದ್ದು, 3ರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.