ಕೋಲ್ಕತಾ(ಏ.14): ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಐಪಿಎಲ್ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ CSK ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಕೆಕೆಆರ್ ಕನಸು ಕೈಗೂಡಲಿಲ್ಲ.  

ಗೆಲುವಿನ 162 ರನ್ ಟಾರ್ಗೆಟ್ ಪಡೆದಿದ್ದ CSK ಉತ್ತಮ ಆರಂಭ ಪಡೆಯಲಿಲ್ಲ. ಶೇನ್ ವ್ಯಾಟ್ಸನ್ ಕೇವಲ 6 ರನ್ ಸಿಡಿಸಿ ಔಟಾದರು. ಫಾಫ್ ಡುಪ್ಲೆಸಿಸ್ ಹಾಗೂ ಸುರೇಶ್ ರೈನಾ ಜೊತೆಯಾಟ ಕೂಡ ಹೆಚ್ಚು ಹೊತ್ತು ಇರಲಿಲ್ಲ. ಡುಪ್ಲಸಿಸ್ 24 ರನ್ ಸಿಡಿಸಿ ಔಟಾದರು. ಆದರೆ ರೈನಾ ಹೋರಾಟ ಮುಂದುವರಿಸಿದರು.

ಅಂಬಾಟಿ ರಾಯುಡು ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ CSK ಆತಂಕ ಹೆಚ್ಚಿಸಿದರು. CSK ತಂಡಕ್ಕೆ ಆಧಾರವಾಗಿದ್ದ ಕೇದಾರ್ ಜಾಧವ್ 20 ರನ್ ಸಿಡಿಸಿ ಔಟಾದರು. ಇನ್ನು ನಾಯಕ ಧೋನಿ ಬ್ಯಾಟ್ ಸದ್ದು ಮಾಡಲಿಲ್ಲ. 

ಹೋರಾಟ ನೀಡಿದ ಸುರೇಶ್ ರೈನಾ ಅರ್ಧಶತಕ ಸಿಡಿಸಿದರು. ಹೀಗಾಗಿ ಅಂತಿಮ 12 ಎಸೆತದಲ್ಲಿ CSK ಗೆಲುವಿಗೆ 24 ರನ್ ಬೇಕಿತ್ತು. ರವೀಂದ್ರ ಜಡೇಜಾ ಹ್ಯಾಟ್ರಿಕ್ ಬೌಂಡರಿ ಸಿಡಿಸೋ ಮೂಲಕ ಗೆಲುವಿನ ಹಾದಿ ಸುಗಮಗೊಳಿಸಿದರು. ರೈನಾ ಅಜೇಯ 58 ಹಾಗೂ ಜಡೇಜಾ ಅಜೇಯ 31 ರನ್ ಸಿಡಿಸೋ ಮೂಲಕ , ಇನ್ನು 2 ಎಸೆತ ಬಾಕಿ ಇರುವಂತೆ ಚೆನ್ನೈ ಗೆಲುವು ಸಾಧಿಸಿತು.