ಮುಂಬೈ(ಏ.13): ಮುಂಬೈ ಇಂಡಿಯನ್ಸ್ ವಿರುದ್ಧದ  ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 4 ವಿಕೆಟ್ ಗೆಲುವು ಸಾಧಿಸಿದೆ. ಜೋಸ್ ಬಟ್ಲರ್ ಹೋರಾಟ, ಅಂತಿಮ ಹಂತದಲ್ಲಿ ಶ್ರೇಯಸ್ ಗೋಪಾಲ್ ಜವಾಬ್ದಾರಿಯುತ ಬ್ಯಾಟಿಂಗ್‍‌ನಿಂದ ರಾಜಸ್ಥಾನ 4 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಸೋಲಿನ ಸುಳಿಯಿಂದ ರಾಜಸ್ಥಾನ ಪಾರಾಗಿದೆ.

"

ಗೆಲುವಿಗೆ 188 ರನ್ ಟಾರ್ಗೆಟ್ ಪಡೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಸ್ ಬಟ್ಲರ್ ಸ್ಫೋಟಕ ಆರಂಭ ನೀಡಿದರು.  ರಹಾನೆ 37 ರನ್ ಸಿಡಿಸಿ ಔಟಾದರು. ಆದರೆ ಬಟ್ಲರ್ ಹೋರಾಟ ಮುಂದುವರಿಸಿದರು.  ಬಟ್ಲರ್ ಅಬ್ಬರದಿಂದ ರಾಜಸ್ಥಾನ ಸುಲಭ ಗೆಲುವಿನ ಹಾದಿ ತುಳಿಯಿತು. 

ಇನ್ನೇನು ಗೆಲುವು ನಮ್ಮದೆ ಎಂದು ಸಂಭ್ರಮಿಸೋ ಹೊತ್ತಿಗೆ ಬಟ್ಲರ್ ವಿಕೆಟ್ ಪತನಗೊಂಡಿತು. ಬಟ್ಲರ್ 43 ಎಸೆತದಲ್ಲಿ 89 ರನ್ ಸಿಡಿಸಿ ಔಟಾದರು. ಬಟ್ಲರ್ ವಿಕೆಟ್ ಪತನದ ಬೆನ್ನಲ್ಲೇ, ರಾಜಸ್ಥಾನ ಸಂಕಷ್ಟಕ್ಕೆ ಸಿಲುಕಿತು.  ಸಂಜು ಸಾಮ್ಸನ್ 31 ರನ್ ಸಿಡಿಸಿ ಔಟಾದರು. ರಾಜಸ್ಥಾನ ದಿಢೀರ್ ಕುಸಿತ ಕಂಡಿತು.

 ರಾಹುಲ್ ತ್ರಿಪಾಠಿ, ಲಿಯಾಮ್ ಲಿವಿಂಗ್‌ಸ್ಟೋನ್ ಅಬ್ಬರಿಸಲಿಲ್ಲ. ಸ್ಟೀವ್ ಸ್ಮಿತ್ ಅಬ್ಬರಿಸಲಿಲ್ಲ. ಕನ್ನಡಿಗ ಶ್ರೇಯಸ್ ಗೋಪಾಲ್ ರಾಜಸ್ಥಾನ ಆತಂಕ ದೂರ ಮಾಡಿದರು. ಅಜೇಯ 13 ರನ್ ಸಿಡಿಸೋ ಮೂಲಕ ರಾಜಸ್ಥಾನ ತಂಡ 4 ವಿಕೆಟ್ ರೋಚಕ ಗೆಲವು ಸಾಧಿಸಿತು.