ಬೆಂಗ​ಳೂ​ರು[ಸೆ.21]: ದಕ್ಷಿಣ ಆಫ್ರಿಕಾ ವಿರು​ದ್ಧದ 2ನೇ ಟಿ20 ಪಂದ್ಯ​ದಲ್ಲಿ ಭರ್ಜರಿ 7 ವಿಕೆಟ್‌ಗ​ಳಿಂದ ಗೆದ್ದ ಭಾರ​ತ, ಭಾನುವಾರ ಇಲ್ಲಿನ ಚಿ​ನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ 3ನೇ ಟಿ-20 ಪಂದ್ಯ​ಕ್ಕಾಗಿ ಶುಕ್ರ​ವಾರ ಬೆಳ​ಗಿ​ನಿಂದಲೇ ಕಠಿಣ ಅಭ್ಯಾಸ ನಡೆ​ಸಿತು. 

ದೆಹಲಿ ತಂಡ ತೊರೆದ ಮತ್ತೊರ್ವ ಸ್ಟಾರ್ ಕ್ರಿಕೆಟರ್!

ಈ ವೇಳೆ ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆಮಿ (ಎನ್‌​ಸಿ​ಎ) ಕ್ರಿಕೆಟ್‌ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಮೈದಾ​ನಕ್ಕೆ ಭೇಟಿ ನೀಡಿ ಭಾರತ ತಂಡದ ಕೋಚ್‌ ರವಿ​ಶಾಸ್ತ್ರಿ, ನಾಯಕ ವಿರಾಟ್‌ ಕೊಹ್ಲಿ ಹಾಗೂ ಇತರ ಆಟ​ಗಾ​ರರ ಜೊತೆ ಸಮಾ​ಲೋ​ಚನೆ ನಡೆ​ಸಿ​ದ​ರು. ಎರಡೂ ತಂಡಗಳ ಆಟಗಾರರು ಅಭ್ಯಾಸ ನಡೆಸಿದರು. ನಾಯಕ ಕೊಹ್ಲಿ, ಬುಮ್ರಾ, ಶಿಖರ್‌ ಧವನ್‌, ಮನೀಶ್‌ ಪಾಂಡೆ, ರೋಹಿತ್‌ ಶರ್ಮಾ ಸೇರಿದಂತೆ ಇತರೆ ಆಟಗಾರರು ನೆಟ್ಸ್‌ನಲ್ಲಿ ಬೆವರು ಸುರಿಸಿದರು. 

ದಿಗ್ಗಜ ದ್ರಾವಿಡ್‍‌ ಜೊತೆ ರವಿ ಶಾಸ್ತ್ರಿ ಹೋಲಿಸಬೇಡಿ; BCCIಗೆ ಅಭಿಮಾನಿಗಳ ಕ್ಲಾಸ್!

3 ಪಂದ್ಯ​ಗಳ ಟಿ20 ಸರ​ಣಿ​ಯಲ್ಲಿ ಧರ್ಮ​ಶಾ​ಲಾ​ದಲ್ಲಿದ್ದ ಮೊದಲ ಪಂದ್ಯ ಮಳೆ​ಯಿಂದಾಗಿ ರದ್ದಾ​ಗಿತ್ತು. ಮೊಹಾ​ಲಿ​ಯಲ್ಲಿ ನಡೆದ 2ನೇ ಪಂದ್ಯ ಗೆದ್ದ ಭಾರತ ಸರಣಿಯಲ್ಲಿ 1-0 ಮುನ್ನ​ಡೆ​ ಪಡೆ​ದಿದ್ದು, ಕೊನೆಯ ಪಂದ್ಯ​ವನ್ನು ಗೆದ್ದು, ಸರಣಿ ಗೆಲ್ಲುವ ವಿಶ್ವಾ​ಸ​ದ​ಲ್ಲಿ ಭಾರತ ತಂಡವಿದೆ.