ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಜೊತೆ ರವಿ ಶಾಸ್ತ್ರಿಯನ್ನು ಹೋಲಿಸಬೇಡಿ ಎಂದು ಅಭಿಮಾನಿಗಳು ಬಿಸಿಸಿಐ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಬಿಸಿಸಿಐ ಹೋಲಿಕೆ ಮಾಡಿದ್ದೇಕೆ? ಇಲ್ಲಿದೆ ವಿವರ.

ಬೆಂಗಳೂರು(ಸೆ.20): ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ಟೀಂ ಇಂಡಿಯಾವನ್ನು, ರಾಷ್ಟ್ರೀಯ ಕ್ರಿಕೆಟ್ ಅಕಾಮೆಡಿ ನೂತನ ಚೇರ್ಮೆನ್ ರಾಹುಲ್ ದ್ರಾವಿಡ್ ಭೇಟಿಯಾದರು. ಈ ವೇಳೆ ಕೋಚ್ ರವಿ ಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಜೊತೆಗಿನ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಆದರೆ ಈ ಟ್ವೀಟ್‌ಗೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

Scroll to load tweet…

ಇದನ್ನೂ ಓದಿ: ಕೆರಿಬಿಯನ್ ಬೀಚ್‌ನಲ್ಲಿ ಶಾಸ್ತ್ರಿ ರಿಲ್ಯಾಕ್ಸ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

ರಾಹುಲ್ ದ್ರಾವಿಡ್ ಹಾಗೂ ಕೋಚ್ ರವಿ ಶಾಸ್ತ್ರಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದ ಬಿಸಿಸಿಐ, ಇಬ್ಬರು ದಿಗ್ಗಜರು ಭೇಟಿಯಾದಗ ಎಂದು ಟ್ವೀಟ್ ಮಾಡಿದೆ. ಇದಕ್ಕೆ ಬಿಸಿಸಿಐ ರಾಹುಲ್ ಹಾಗೂ ದ್ರಾವಿಡ್ ಇಬ್ಬರೂ ಎಂದು ಕನ್ಫ್ಯೂಸ್ ಆಗಿದೆ. ದಿಗ್ಗಜ ದ್ರಾವಿಡ್‌ರನ್ನು ರವಿ ಶಾಸ್ತ್ರಿ ಜೊತೆ ಹೋಲಿಸಬೇಡಿ ಎಂದು ಬಿಸಿಸಿಐಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…