Asianet Suvarna News Asianet Suvarna News

ವಿಶ್ವ ಬಿಲಿಯರ್ಡ್ಸ್ ಚಾಂಪಿ​ಯನ್‌ಶಿಪ್‌: ಪಂಕಜ್‌ಗೆ 22ನೇ ವಿಶ್ವ ಕಿರೀಟ!

ಭಾರತದ ಸ್ಟಾರ್ ಬಿಲಿಯರ್ಡ್ಸ್ ಪಟು ಪಂಕಜ್ ಅಡ್ವಾಣಿ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್ 150 ಅಪ್‌ ಮಾದರಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಪಂಕಜ್ 22ನೇ ಬಾರಿಗೆ ವಿಶ್ವ ಚಾಂಪಿ​ಯನ್‌ ಪಟ್ಟ ಅಲಂಕ​ರಿ​ಸಿದ ಸಾಧನೆ ಮಾಡಿ​ದ್ದಾ​ರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.. 

Indian billiards star Pankaj Advani wins 22nd world billiards title
Author
Mandalay, First Published Sep 16, 2019, 10:32 AM IST

ಮ್ಯಾಂಡಲೆ(ಸೆ.16): ಭಾರತದ ತಾರಾ ಬಿಲಿಯರ್ಡ್ಸ್ ಪಟು ಪಂಕಜ್‌ ಅಡ್ವಾಣಿ, ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್ 150 ಅಪ್‌ ಮಾದರಿಯಲ್ಲಿ ಚಾಂಪಿಯನ್‌ ಆಗಿದ್ದಾರೆ. ಈ ಮಾದರಿಯಲ್ಲಿ ಸತತ 4ನೇ ಬಾರಿ ಪಂಕಜ್‌ ಫೈನಲ್‌ನಲ್ಲಿ ಜಯಗಳಿಸಿ ಪ್ರಶಸ್ತಿ ಗೆದ್ದಿದ್ದಾರೆ. ಇದರೊಂದಿಗೆ ಪಂಕಜ್‌ 22ನೇ ಬಾರಿಗೆ ವಿಶ್ವ ಚಾಂಪಿ​ಯನ್‌ ಪಟ್ಟಅಲಂಕ​ರಿ​ಸಿದ ಸಾಧನೆ ಮಾಡಿ​ದ್ದಾ​ರೆ. ಕಳೆದ 6 ವರ್ಷಗಳಲ್ಲಿ ಪಂಕಜ್‌ಗೆ ಇದು 5ನೇ ವಿಶ್ವ ಚಾಂಪಿ​ಯನ್‌ಶಿಪ್‌ ಆಗಿದೆ.

ಆ್ಯಷಸ್‌ ಕದನ: ಇಂಗ್ಲೆಂಡ್’ಗೆ 135 ರನ್ ಗೆಲುವು

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಪಂಕಜ್‌, ಸ್ಥಳೀಯ ಆಟಗಾರ ನೇಥಾವೆ ವಿರುದ್ಧ 6-2 ಫ್ರೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ಆವೃತ್ತಿಯಲ್ಲಿ ಕೂಡ ಪಂಕಜ್‌, ನೇಥಾವೆ ಎದುರಿನ ಫೈನಲ್‌ನಲ್ಲಿ ಪ್ರಾಬಲ್ಯ ಮೆರೆದು ಟ್ರೋಫಿ ಜಯಿಸಿದ್ದರು. ಮೊದಲಾರ್ಧದಲ್ಲಿ ಪಂಕಜ್‌ 3-0 ಮುನ್ನಡೆ ಸಾಧಿಸಿದ್ದರು. ನಂತರವೂ ಆಕರ್ಷಕ ಆಟ ಮುಂದು​ವ​ರಿಸಿ, ಪಂಕಜ್‌ ಸುಲಭ ಗೆಲುವು ಸಾಧಿ​ಸಿ​ದರು.

ಹರ್ಯಾಣ ಕ್ರೀಡಾ ವಿವಿಗೆ ಕಪಿಲ್‌ ದೇವ್ ಕುಲ​ಪ​ತಿ!

ಜಾಗ​ತಿಕ ಮಟ್ಟ​ದಲ್ಲಿ 2003ರಿಂದ ಪ್ರಶ​ಸ್ತಿ​ಗ​ಳನ್ನು ಗೆಲ್ಲು​ತ್ತಿ​ರುವ ಪಂಕಜ್‌, ಕ್ಯೂ ಸ್ಪೋರ್ಟ್ಸ್ (ಬಿ​ಲಿ​ಯರ್ಡ್ಸ್ ಹಾಗೂ ಸ್ನೂಕರ್‌)ನಲ್ಲಿ ಅತಿ​ಹೆಚ್ಚು ವಿಶ್ವ ಚಾಂಪಿ​ಯನ್‌ಶಿಪ್‌ ಟ್ರೋಫಿ​ಗ​ಳನ್ನು ಗೆದ್ದಿ​ದ್ದಾರೆ.
 

Follow Us:
Download App:
  • android
  • ios