"

ಬೆಂಗಳೂರು[ಸೆ.03]: ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಕಿಂಗ್ಸ್ ಟನ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 210 ರನ್’ಗಳಿಗೆ ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ 257 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಕೊಹ್ಲಿ ನೆರವಿಲ್ಲದಿದ್ದರೆ, ನಾನೇನಾಗುತ್ತಿದ್ದೆ ಗೊತ್ತಿಲ್ಲ; ಸುಮಿತ್ ನಗಾಲ್!

ಈ ಟೆಸ್ಟ್ ಗೆಲುವಿನೊಂದಿಗೆ, ಭಾರತಕ್ಕೆ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕ ಎನ್ನುವ ದಾಖಲೆ ಕೊಹ್ಲಿ[28] ಪಾಲಾಗಿದೆ. ಇದರ ಜತೆಗೆ ಭಾರತ ಮಾತ್ರವಲ್ಲದೇ ಏಷ್ಯಾದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ಕೀರ್ತಿಯೂ ಕೊಹ್ಲಿ ಭಾಜನರಾಗಿದ್ದಾರೆ.  

ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

468 ರನ್’ಗಳ ಗುರಿ ಬೆನ್ನತ್ತಿದ ವಿಂಡೀಸ್ 210 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.  ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆಯುವ ಮೂಲಕ, ಇನ್ನೂ ಒಂದು ದಿನ ಬಾಕಿ ಇರುವಾಗಲೇ ವಿರಾಟ್ ಪಡೆ ಗೆಲುವಿನ ನಗೆ ಬೀರಿತು.  ಟೀಂ ಇಂಡಿಯಾದ ಈ ಅದ್ಭುತ ಪ್ರದರ್ಶನವನ್ನು ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.