ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧದಿಂದ ಆಸ್ಟ್ರೇಲಿಯಾ ತಂಡ ಕಳಪೆಯಾಗಿದೆ. ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಕಾರಣ ಅನ್ನೋ ಮಾತುಗಳು ಸಾಮಾನ್ಯವಾಗಿದೆ. ಆದರೆ ಆಸಿಸ್ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ನೀಡಿರುವ ಅಂಕಿ ಅಂಶ, ಆಸಿಸ್ ತಂಡ ಸಂಪೂರ್ಣ ಕಳಪೆಯಾಗಿದೆ ಅನ್ನೋದನ್ನ ಸಾರಿ ಹೇಳುತ್ತಿದೆ.

ಸಿಡ್ನಿ(ಜ.03): ಆಸ್ಟ್ರೇಲಿಯಾ ತಂಡ ಕಳಪೆಯಾಗಲು ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿ ಕಾರಣ ಅನ್ನೋ ಮಾತು ಬಲವಾಗಿ ಕೇಳಿಬರುತ್ತಿದೆ. ಸ್ಮಿತ್ ಹಾಗೂ ವಾರ್ನರ್ ನಿಷೇಧದಿಂದ ಆಸ್ಟ್ರೇಲಿಯಾ ಸದ್ಯ ನಡೆಯುತ್ತಿರುವ ಭಾರತ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ ಎಂದು ಆಸಿಸ್ ಕ್ರಿಕೆಟಿಗರೇ ಹೇಳಿದ್ದಾರೆ. ಆದರೆ ಆಸ್ಟ್ರೇಲಿಯಾ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಅಚ್ಚರಿ ಅಂಕಿ ಅಂಶ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಕೆಎಲ್ ರಾಹುಲ್‌ಗಿಂತ ಉತ್ತಮ ಒಪನರ್ ಹುಡುಕಿಕೊಟ್ಟ ಅಭಿಮಾನಿ!

ಆಸ್ಟ್ರೇಲಿಯಾ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಬೌಲಿಂಗ್‌ನಲ್ಲೂ ಕಳಪೆಯಾಗಿದೆ ಎಂದಿದ್ದಾರೆ. ಇದಕ್ಕೆ ಪೂರಕವಾದ ಅಂಕಿ ಅಂಶ ನೀಡಿದ್ದಾರೆ. ಆಸ್ಟ್ರೇಲಿಯಾ ಈ ಸರಣಿಯಲ್ಲಿ 2592 ಎಸೆತ ಮಾಡಿದೆ. ಇದರಲ್ಲಿ ಕೇವಲ 205 ಎಸೆತಗಳು ವಿಕೆಟ್ ಟು ವಿಕೆಟ್ ಮಾಡಿದೆ. ಆದರೆ ಭಾರತ 8 ಎಲ್‌‍ಬಿಡಬ್ಲೂ(LBW) ಮಾಡಿದೆ. ಇದರಲ್ಲಿ ಜಸ್ಪ್ರೀತ್ ಬುಮ್ರಾ ಪಾಲು 6. ಇನ್ನು ಆಸ್ಟ್ರೇಲಿಯಾ ಕೇವಲ 1 LBW. ಅದೂ ನತನ್ ಲಿಯೋನ್‌ಗೆ ವಿಕೆಟ್. ಹೀಗಾಗಿ ಆಸಿಸ್ ವೇಗಿಗಳು ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿಲ್ಲ. ಹೀಗಾಗಿ ಬ್ಯಾಟಿಂಗ್ ಮಾತ್ರವಲ್ಲ ಇಡೀ ತಂಡವೇ ಕಳಪೆಯಾಗಿದೆ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಇದನ್ನೂ ಓದಿ:ಅಫ್ರಿದಿ ವಿರುದ್ಧ ಅಚ್ಚರಿಕೆಯ ಹೇಳಿಕೆ ನೀಡಿದ ನಿಷೇಧಿತ ಕ್ರಿಕೆಟಿಗ..!

ಸದ್ಯ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ 4ನೇ ಪಂದ್ಯದ ಮೊದಲ ದಿನ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 303 ರನ್ ಸಿಡಿಸಿದೆ. ಇನ್ನು ಸರಣಿಯಲ್ಲಿ 2-1 ಅಂತರದಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ.