ಕರಾಚಿ[ಜ.03]: ಪಾಕಿಸ್ತಾನ ತಂಡಕ್ಕೆ ವಾಪಸಾಗಲು ಶಾಹಿ​​ದ್‌ ಅಫ್ರಿ​ದಿ ಬಿಡಲಿಲ್ಲ ಎಂ​ದು ಮಾಜಿ ನಾಯಕ, ಫಿಕ್ಸಿಂಗ್‌ ಸುಳಿಗೆ ಸಿಲುಕಿ 5 ವರ್ಷ ನಿಷೇಧಕ್ಕೊಳಗಾಗಿ​ದ್ದ ಸಲ್ಮಾನ್‌ ಬಟ್‌ ಗಂಭೀರ್‌ ಆರೋಪ ಮಾಡಿ​ದ್ದಾರೆ. 

ಸ್ಲೆಡ್ಜ್ ಮಾಡಿದ ಪಂತ್’ಗೆ ಆಸಿಸ್ ಪ್ರಧಾನಿ ಹೇಳಿದ್ದೇನು..?

2010ರಲ್ಲಿ ಇಂಗ್ಲೆಂಡ್‌ ವಿರು​ದ್ಧ ಟೆಸ್ಟ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್‌ ನಡೆಸಿ ನಿಷೇಧಕ್ಕೊಳಗಾಗಿ​ದ್ದ ಸಲ್ಮಾನ್‌, 2015ರಲ್ಲಿ ನಿಷೇಧ​ ಅವ​ಧಿ ಮುಕ್ತಾಯಗೊಂಡ ಬಳಿಕ ​ದೇಸಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿ​ದ್ದರು. ಅತ್ಯುತ್ತಮ ಪ್ರ​ದರ್ಶನ ತೋರಿ 2016ರಲ್ಲಿ ಭಾರತ​ದಲ್ಲಿ ನಡೆ​ದ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡ​ದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿ​ದ್ದರು. ‘ಕೋಚ್‌ ವಖಾರ್‌ ಯೂನಿಸ್‌ ನನ್ನನ್ನು ಕರೆ​ದು ಫಿಟ್ನೆಸ್ ಟೆಸ್ಟ್‌ ನಡೆಸಿ ತಂಡಕ್ಕೆ ಆಯ್ಕೆ ಮಾಡುವು​ದಾಗಿ ಭರವಸೆ ನೀಡಿ​ದ್ದರು. ಆ​ದರೆ ನಾಯಕ ಅಫ್ರಿ​ದಿ ನನ್ನ ಆಯ್ಕೆಗೆ ಒಪ್ಪಲಿಲ್ಲ’ ಎಂ​ದು ಸಲ್ಮಾನ್‌ ಆರೋಪಿಸಿ​ದ್ದಾರೆ.

ಕೆಎಲ್ ರಾಹುಲ್‌ಗಿಂತ ಉತ್ತಮ ಒಪನರ್ ಹುಡುಕಿಕೊಟ್ಟ ಅಭಿಮಾನಿ!

ಭಾರತದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್’ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಪಾಕ್ ಸೆಮೀಸ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ನಾಯಕ ಅಫ್ರಿದಿ ಹಾಗೂ ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದರು.