ಸಿಡ್ನಿ(ಜ.03): 2018ನೇ ವರ್ಷವನ್ನ ಕಹಿಯೊಂದಿಗೆ ಅಂತ್ಯಗೊಳಿಸಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಇದೀಗ 2019ರಲ್ಲೂ ನಿರಾಸೆ ಅನುಭವಿಸಿದ್ದಾರೆ.  ಕಳಪೆ ಪ್ರದರ್ಶನದಿಂದ ಪ್ಲೇಯಿಂಗ್ 11ನಲ್ಲಿ ಸ್ಥಾನ ಕಳೆದುಕೊಂಡಿದ್ದ ರಾಹುಲ್, ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 9ರನ್ ಸಿಡಿಸಿ ನಿರ್ಗಮಿಸಿದರು.

ಇದನ್ನೂ ಓದಿ: ಪೂಜರಾ ಶತಕ, ಮಯಾಂಕ್ ಅರ್ಧಶತಕ-ಬೃಹತ್ ಮೊತ್ತದತ್ತ ಭಾರತ!

ರಾಹುಲ್ ಕಳಪೆ ಪ್ರದರ್ಶನ ಅಭಿಮಾನಿಗಳಿಗೂ ಬೇಸರ ತರಿಸಿದೆ. ಕೆ.ಎಲ್.ರಾಹುಲ್ ಕ್ಲಾಸ್ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಅನುಮಾನವಿಲ್ಲ. ಫಾರ್ಮ್ ಸಮಸ್ಯೆ ರಾಹುಲ್‌ಗೆ ಕಾಡುತ್ತಿದೆ. ಸತತ ವೈಫಲ್ಯ ರಾಹುಲ್ ಆತ್ಮವಿಶ್ವಾಸವನ್ನೇ ಮಟ್ಟಹಾಕುತ್ತಿದೆ. ರಾಹುಲ್ ಫ್ಲಾಪ್ ಶೋಗೆ ಟ್ವಿಟರ್ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ.