ಸಿಡ್ನಿ(ಜ.06): ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಇದೀಗ ಸೋಲಿನ ಸುಳಿಗೆ ಸಿಲುಕಿದೆ. ಬ್ಯಾಡ್ ಲೈಟ್ ಹಾಗೂ ಮಳೆಯಿಂದಾಗಿ 4ನೇ ದಿನದಾಟ ಬಹುಬೇಗನೆ ಮುಕ್ತಾಯಗೊಂಡಿದೆ. ಹೀಗಾಗಿ ಕಾಂಗರೂಗಳ ಸೋಲು ಇದೀಗ ಪಂದ್ಯದ 5 ಹಾಗೂ ಅಂತಿಮ ದಿನಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ಸಿಡ್ನಿ ಟೆಸ್ಟ್ : ಆಸಿಸ್ ಮೇಲೆ ಫಾಲೋ ಆನ್ ಹೇರಿದ ಟೀಂ ಇಂಡಿಯಾ

6 ವಿಕೆಟ್ ನಷ್ಟಕ್ಕೆ 236 ರನ್‌ಗಳೊಂದಿಗೆ ಇನ್ನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ಮತ್ತೆ ಟೀಂ ಇಂಡಿಯಾ ದಾಳಿಗೆ ಕುಸಿಯಿತು. ಆರಂಭದಲ್ಲೇ ಮೊಹಮ್ಮದ್ ಶಮಿ ಅಬ್ಬಿರಿಸದರು. ಪ್ಯಾಟ್ ಕಮಿನ್ಸ್ 25 ರನ್‌ಗೆ ಔಟಾದರು. ಮತ್ತೆ ಮೋಡಿ ಮಾಡಿದ ಕುಲ್ದೀಪ್ ಯಾದವ್ ಕಾಂಗರೂಗಳ ಮೇಲೆ ಸವಾರಿ ಮಾಡಿದರು. ಹೀಗಾಗಿ ಆಸ್ಟ್ರೇಲಿಯಾ 300 ರನ್‌ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಟೀಂ ಇಂಡಿಯಾ 322 ರನ್ ಮುನ್ನಡೆ ಸಾಧಿಸಿತು.

ಇದನ್ನೂ ಓದಿ: ಬ್ಯಾಟಿಂಗ್’ನಲ್ಲಿ ಫೇಲ್, ಪ್ರಾಮಾಣಿಕತೆಯಲ್ಲಿ ಪಾಸ್: ಇದು ಕನ್ನಡಿಗ ಖದರ್

ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಜಸ್ಪ್ರೀತ್ ಬುಮ್ರಾ 1 ವಿಕೆಟ್ ಉರುಳಿಸಿದರು. 322 ರನ್ ಭಾರಿ ಮುನ್ನಡೆ ಪಡೆದ ಟೀಂ ಇಂಡಿಯಾ, ಆಸ್ಟ್ರೇಲಿಯಾಗೆ ಫಾಲೋ-ಆನ್ ಹೇರಿತು. ಇದೇ 1988ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತನ್ನ ನೆಲದಲ್ಲಿ ಫಾಲೋ-ಆನ್ ಮುಖಭಂಗಕ್ಕೆ ತುತ್ತಾಯಿತು. 

ಇದನ್ನೂ ಓದಿ: ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್

ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಬ್ಯಾಡ್ ವೆದರ್ ಆಸರೆಯಾಯಿತು. 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 6 ರನ್‌ಗಳಿಸಿದ ವೇಳೆ ಪಂದ್ಯ ಸ್ಥಗಿತಗೊಂಡಿತು. ಮೋಡದ ಕಾರಣ ಪಂದ್ಯ ಮುಂದುವರಿಸುವುದು ಕಷ್ಟವಾಗಿ ಪರಿಣಮಿಸಿತು. ಹೀಗಾಗಿ ದಿನದಾಟವನ್ನ ಅಂತ್ಯಹೊಳಿಸಿತು. ಸದ್ಯ ಆಸ್ಟ್ರೇಲಿಯಾ 316 ರನ್ ಹಿನ್ನಡೆಯಲ್ಲಿದೆ. ಇದೀಗ ಅಂತಿಮ ದಿನ ಸಂಪೂರ್ಣ ಆಟ ಲಭ್ಯವಾದರೆ ಟೀಂ ಇಂಡಿಯಾ ಗೆಲುವು ಖಚಿತವಾಗಲಿದೆ.