ಮಯಾಂಕ್ ಹಾಗೂ ರಣಜಿ ಕ್ರಿಕೆಟ್ ಅವಮಾನಿಸಿದ ಆಸಿಸ್ ಕಮೆಂಟೇಟರ್!
ಮಯಾಂಕ್ ಅಗರ್ವಾಲ್ ಹಾಗೂ ಭಾರತದ ರಣಜಿ ಕ್ರಿಕೆಟ್‌ನ್ನ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಅವಮಾನಿಸಿದ್ದಾರೆ. ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಆಸಿಸ್ ಕಮೆಂಟೇಟರ್ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಮೆಲ್ಬರ್ನ್(ಡಿ.26): ಆಸ್ಟ್ರೇಲಿಯಾ ವಿರುದ್ಧದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದ ಆರಂಭಿಕರ ಸಮಸ್ಯೆಗೆ ಉತ್ತರ ನೀಡಿದ್ದಾರೆ. ಪದಾರ್ಪಣೆ ಪಂದ್ಯದದಲ್ಲೇ 76 ರನ್ ಸಿಡಿಸಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದಾರೆ.
ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್: ಮಯಾಂಕ್ ಅಬ್ಬರ-ಮೇಲುಗೈ ಸಾಧಿಸಿದ ಭಾರತ!
ಮಯಾಂಕ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಕೆರಿ ಓ ಕೀಫೆ ಅವಮಾನ ಮಾಡಿದ್ದಾರೆ. ಮಯಾಂಕ್ ರಣಜಿ ಟೂರ್ನಿಯಲ್ಲಿ ತ್ರಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಮಯಾಂಕ್ ಸಾಧನೆಯ ಅಂಕಿ ಅಂಶ ನೋಡಿ ಕೆರಿ ಓ ಕೀಫೆ, ತ್ರಿಶತಕ ಯಾವುದೋ ಕ್ಯಾಂಟೀನ್ ಸಿಬ್ಬಂಧಿಗಳು ಅಥವಾ ಹೊಟೆಲ್ ವೈಟರ್ ವಿರುದ್ಧ ಹೊಡೆದಿರಬಹುದು ಎಂದಿದ್ದಾರೆ.
ಇದನ್ನೂ ಓದಿ: ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ!
ಮಯಾಂಕ್ ಅಗರ್ವಾಲ್ ಹಾಗೂ ಭಾರತದ ರಣಜಿ ಕ್ರಿಕೆಟ್‌ಗೆ ಅವಮಾನ ಮಾಡಿದ ಬೆನ್ನಲ್ಲೇ, ಮಾಜಿ ನಾಯಕ ಸ್ಟೀವ್ ವ್ಹಾ , ಮಯಾಂಕ್ ಭಾರತದಲ್ಲಿ ಬ್ಯಾಟಿಂಗ್ ಸರಾಸರಿ 50 , ಆದರೆ ಆಸ್ಟ್ರೇಲಿಯಾ ನೆಲಕ್ಕೆ ಹೋಲಿಸಿದರೆ 40 ಎಂದಿದ್ದಾರೆ. ಈ ಮೂಲಕ ಆಸಿಸ್ ದೇಸಿ ಕ್ರಿಕೆಟ್ ಶ್ರೇಷ್ಠ ಭಾರತದ ಕ್ರಿಕೆಟ್ ಕಳಪೆ ಗುಣಮಟ್ಟ ಹೊಂದಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಜಡೇಜಾ ಫಿಟ್ನೆಸ್ ಗುಟ್ಟು ಮುಚ್ಚಿಟ್ಟಿದ್ದ ಭಾರತ!
ಕೀಫೆ ಹಾಗೂ ಸ್ಟೀವ್ ವ್ಹಾ ಹೇಳಿಕೆಗೆ ಮಯಾಂಕ್ ಬ್ಯಾಟಿಂಗ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಮಯಾಂಕ್ 76 ರನ್ ಸಿಡಿಸಿದ್ದಾರೆ. ಭಾರತ ಮೊದಲ ದಿನದಾಟದಲ್ಲಿ 2 ವಿಕೆಟ್ ನಷ್ಟಕ್ಕೆ 215 ರನ್ ಸಿಡಿಸಿದೆ.