ಮೆಲ್ಬರ್ನ್(ಡಿ.26): ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಆರಂಭಿಕರಾದ ಕೆಎಲ್  ರಾಹುಲ್ ಹಾಗೂ ಮರುಳಿ ವಿಜಯ್‌ಗೆ ಕೊಕ್ ನೀಡಿ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ  ಸ್ಥಾನ ನೀಡಲಾಗಿದೆ. ಸಿಕ್ಕ ಅವಕಾಶದಲ್ಲೇ ಮಯಾಂಕ್ ಹಾಫ್ ಸೆಂಚುರಿ ಸಿಡಿಸಿ ಸ್ಥಾನ ಭದ್ರಪಡಿಸಿಕೊಳ್ಳೋ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮಯಾಂಕ್ ಅವಮಾನಿಸಿದ ಕಮಂಟೇಟರ್‌ಗೆ ಟ್ವಿಟರಿಗರ ಮಂಗಳಾರತಿ!

ಮಯಾಂಕ್ ಅಗರ್ವಾಲ್ ಟೆಸ್ಟ್ ಕ್ಯಾಪ್ ಪಡೆಯುತ್ತಿದ್ದಂತೆ, ಗೆಳೆಯ ಕೆಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ.  ನೆಚ್ಚಿನ ಗೆಳೆಯ ಟೀಂ ಇಂಡಿಯಾಗೆ ಪದಾರ್ಪಣೆ ಮಾಡುತ್ತಿರುವುದು ನನಗೆ ಹೆಮ್ಮೆ ಎನಿಸಿದೆ. ಶುಭಾರಂಭ ಮಾಡುತ್ತಿರುವ ಗೆಳೆಯನಿಗೆ ಶುಭಾಶಯ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್: ಮಯಾಂಕ್ ಅಗರ್’ವಾಲ್ ಭರ್ಜರಿ ಅರ್ಧಶತಕ

ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ 76 ರನ್ ಸಿಡಿಸಿದ್ದಾರೆ. 8 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಿಡಿಸಿದ ಮಯಾಂಕ್ ಟೀಂ ಇಂಡಿಯಾದ ಆರಂಭಿಕರ ಸಮಸ್ಯೆಗೆ ಉತ್ತರ ನೀಡಿದ್ದಾರೆ. 

ಇದನ್ನೂ ಓದಿ: ಮಯಾಂಕ್ ಅಗರ್'ವಾಲ್ ಬ್ಯಾಟಿಂಗ್’ಗೆ ಮನಸೋತ ಟ್ವಿಟರಿಗರು