ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಭಾರತದ ರಣಜಿ ಕ್ರಿಕೆಟ್ ಕುರಿತು ಅವಮಾನ ಮಾಡಿದ್ದ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರನಿಗೆ ಟ್ವಿಟರಿಗರು ತಿರುಗೇಟು ನೀಡಿದ್ದಾರೆ.
ಮೆಲ್ಬರ್ನ್(ಡಿ.26): ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಮಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಕೆರಿ ಓ ಕೀಫೆ ಅವಮಾನ ಮಾಡಿದ್ದರು. ದೇಸಿ ಕ್ರಿಕೆಟ್‌ನಲ್ಲಿ ಮಯಾಂಕ್ ತ್ರಿಶತಕ ಸಿಡಿಸಿರೋದು ಯಾವುದೋ ಕ್ಯಾಂಟೀನ್ ಸಿಬ್ಬಂಧಿ ಅಥವಾ ಹೊಟೆಲ್ ವೈಟರ್ ವಿರುದ್ಧ ಎಂದು ಅವಮಾನ ಮಾಡಿದ್ದರು.
ಇದನ್ನೂ ಓದಿ: ಮಯಾಂಕ್ ಹಾಗೂ ರಣಜಿ ಕ್ರಿಕೆಟ್ ಅವಮಾನಿಸಿದ ಆಸಿಸ್ ಕಮೆಂಟೇಟರ್!
ಮಯಾಂಕ್ ಹಾಗೂ ಭಾರತ ರಣಜಿ ಟೂರ್ನಿಯನ್ನ ಅವಮಾನಿಸಿದ ಆಸಿಸ್ ವೀಕ್ಷಕ ವಿವರಣೆಗಾರನಿಗೆ ಮಯಾಂಕ್ 76 ರನ್ ಸಿಡಿಸಿ ಬ್ಯಾಟ್ ಮೂಲಕ ಉತ್ತರ ನೀಡಿದ್ದರು. ಇದೀಗ ಟ್ವಿಟರಿಗರು ಮಂಗಳಾರತಿ ಮಾಡಿದ್ದಾರೆ.
ಇದನ್ನೂ ಓದಿ: ಮಯಾಂಕ್ ಅಗರ್'ವಾಲ್ ಬ್ಯಾಟಿಂಗ್’ಗೆ ಮನಸೋತ ಟ್ವಿಟರಿಗರು
