ನವದೆಹಲಿ[ಏ.30]: ತಮ್ಮ ವಿರುದ್ಧ ಕೇಳಿ ಬಂದಿರುವ ಸ್ವಹಿತಾಸಕ್ತಿ ಆರೋಪದಿಂದ ಆಕ್ರೋಶಗೊಂಡಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌, ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ)ಯಲ್ಲಿ ತಮ್ಮ ಪಾತ್ರವೇನು ಎನ್ನುವುದನ್ನು ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಇದುವರೆಗೂ ವಿವರಿಸಿಲ್ಲ ಎಂದಿದ್ದಾರೆ. 

ಐಪಿಎಲ್‌ನಲ್ಲಿ ಸನ್‌ರೈಸ​ರ್ಸ್ ಹೈದರಾಬಾದ್‌ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಣ್‌, ‘ಕ್ರಿಕೆಟ್‌ ಸಲಹಾ ಸಮಿತಿಯಲ್ಲಿರುವ ನಾನು ಭಾರತ ತಂಡದ ಆಯ್ಕೆಯಲ್ಲಿ ಪಾತ್ರ ನಿರ್ವಹಿಸುವುದಿಲ್ಲ. ಭಾರತೀಯ ಕ್ರಿಕೆಟ್‌ನ ಏಳಿಗೆಗಾಗಿ ಸಹಕರಿಸುವಂತೆ ಕೇಳಿಕೊಂಡಿದ್ದಕ್ಕೆ ಸಲಹಾ ಸಮಿತಿಗೆ ಸೇರಲು ಒಪ್ಪಿಕೊಂಡೆ. ಆದರೆ ನಮ್ಮಿಂದ ಯಾವ ಅಭಿಪ್ರಾಯಗಳನ್ನೂ ಬಿಸಿಸಿಐ ಕೇಳುತ್ತಿಲ್ಲ. ಹೀಗಿದ್ದಾಗ ಐಪಿಎಲ್‌ ತಂಡದ ಮಾರ್ಗದರ್ಶಕರಾದರೆ ಸ್ವಹಿತಾಸಕ್ತಿ ಹೇಗಾಗುತ್ತದೆ’ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್’ನಿಂದ ಸಚಿನ್‌ಗಿಲ್ಲ ಸಂಭಾವನೆ!

ಈ ಹಿಂದೆ ಸಚಿನ್ ತೆಂಡುಲ್ಕರ್ ಕೂಡಾ ನೋಟಿಸ್’ಗೆ ಉತ್ತರಿಸಿದ್ದು, ನಾನು ಮುಂಬೈ ಇಂಡಿಯನ್ಸ್ ತಂಡದಿಂದ ಯಾವುದೇ ಸಂಭಾವನೆಯನ್ನು ಪಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.