Breaking: ಜಿಮ್ನಾಸ್ಟಿಕ್ಸ್‌ಗೆ ವಿದಾಯ ಹೇಳಿದ ದೀಪಾ ಕರ್ಮಾಕರ್
ಜಿಮ್ನಾಸ್ಟಿಕ್ಸ್‌ನಲ್ಲೂ ಮನಸ್ಸು ಮಾಡಿದರೆ ಭಾರತ ಒಲಿಂಪಿಕ್ಸ್‌ನಲ್ಲಿ ದೊಡ್ಡ ಸಾಧನೆ ಮಾಡಬಹುದು ಎನ್ನುವ ವಿಶ್ವಾಸವನ್ನು ನೀಡಿದಿ ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ತಮ್ಮ 31ನೇ ವಯಸ್ಸಿನಲ್ಲಿ ಕ್ರೀಡೆಗೆ ವಿದಾಯ ಘೋಷಣೆ ಮಾಡಿದ್ದಾರೆ.
ನವದೆಹಲಿ (ಅ.7): ತನ್ನ ಅಸಾಧಾರಣ ಪ್ರದರ್ಶನದ ಮೂಲಕ ದೇಶದ ಗಮನಸೆಳೆದಿದ್ದ ಭಾರತದ ಪ್ರಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸೋಮವಾರ ಕ್ರೀಡೆಯಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. 31 ವರ್ಷದ ಅಥ್ಲೀಟ್ ಭಾವನಾತ್ಮಕ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಬಹಿರಂಗ ಮಾಡಿದ್ದಾರೆ. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಮತ್ತು ಭಾರತೀಯ ಜಿಮ್ನಾಸ್ಟಿಕ್ಸ್ ಅನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಸಾಹಸದೊಂದಿಗೆ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ. "ಮ್ಯಾಟ್‌ನಿಂದ ಹೊರಹೋಗುತ್ತಿದ್ದೇನೆ! ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು. ಮುಂದಿನ ಅಧ್ಯಾಯಕ್ಕೆ ಕಾತರಳಾಗಿದ್ದೇನೆ" ಅವರು ತಮ್ಮ ನಿವೃತ್ತಿಯ ಪ್ರಕಟಣೆಯ ಜೊತೆಗೆ Instagram ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ತನ್ನ ಭಾವುಕ ಪೋಸ್ಟ್‌ನಲ್ಲಿ, ದೀಪಾ ಕನಸುಗಳನ್ನು ಹೊಂದಿರುವ ಚಿಕ್ಕ ಹುಡುಗಿಯಿಂದ ಪ್ರಸಿದ್ಧ ಕ್ರೀಡಾಪಟುವಿನವರೆಗೆ ತನ್ನ ಪ್ರಯಾಣವನ್ನು ತಿಳಿಸಿಕೊಟ್ಟಿದ್ದಾರೆ. ಐದು ವರ್ಷದ ದೀಪಾಗೆ ತನ್ನ ಚಪ್ಪಟೆ ಪಾದದಿಂದಾಗಿ ಜಿಮ್ನಾಸ್ಟ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದು ನನಗೆ ಇನ್ನೂ ನೆನಪಿದೆ" ಎಂದು ಅವರು ಬರೆದಿದ್ದಾರೆ. "ಆದರೆ ಇಂದು ನನ್ನ ಸಾಧನೆಗಳನ್ನು ನೋಡಿ ಹೆಮ್ಮೆಪಡುತ್ತೇನೆ" ಎಂದು ಅವರು ತಿಳಿಸಿದ್ದಾರೆ.
ಕ್ರೀಡಾ ಜೀವನದ ಆರಂಭದಲ್ಲಿ ಎದುರಿಸಿದ ಹಿನ್ನಡೆಯನ್ನು ಮೀರಿ ದೀಪಾ ನಿರೀಕ್ಷೆಗೂ ಮೀರಿ ಪ್ರದರ್ಶನ ತೋರಿ ಭಾರತದ ಪ್ರಮುಖ ಕ್ರೀಡಾಪಟುಗಳಲ್ಲಿ ಒಂದಾದರು. ಕ್ರಿಕೆಟ್, ಬ್ಯಾಡ್ಮಿಂಟನ್ ಹಾಗೂ ಕಬಡ್ಡಿಯಂಥ ಜನಪ್ರಿಯ ಕ್ರೀಡೆಗಳ ನಡುವೆ ಹೆಚ್ಚು ಜನಪ್ರಿಯವಲ್ಲದ ಜಿಮ್ನಾಸ್ಟಿಕ್ಸ್‌ನಲ್ಲಿ ದೇಶವೇ ವಿಸ್ಮಯಗೊಳ್ಳುವಂಥ ಪ್ರದರ್ಶನ ತೋರಿದ್ದರು. ತ್ರಿಪುರಾದ ಅಗರ್ತಲಾದಲ್ಲಿ ಜನಿಸಿದ ಕರ್ಮಾಕರ್ ಅವರು ತಮ್ಮ ಅಲ ಮನೋಭಾವ ಹಾಗೂ ಅದಮ್ಯ ಉತ್ಸಾಹದ ಕಾರಣಕ್ಕಾಗಿಯೇ ಗುರುತಿಸಲ್ಪಟ್ಟಿದ್ದಾರೆ. ಜಿಮ್ನಾಸ್ಟಿಕ್ಸ್‌ನಲ್ಲಿ ಗಮನಾರ್ಹ ಅನನುಕೂಲತೆಯಾಗಿ ಕಂಡುಬಂದ ಆಕೆಯ ಚಪ್ಪಟೆ ಪಾದಗಳಿಂದಾಗಿ ಆರಂಭಿಕ ಹಿನ್ನಡೆಯ ಹೊರತಾಗಿಯೂ, ದೀಪಾ ಅವರ ಪರಿಶ್ರಮದ ಮುಂದೆ ಇದು ಮಂಕಾಯಿತು. ಆಕೆಯ ತರಬೇತುದಾರರಾದ ಬಿಶ್ವೇಶ್ವರ್ ನಂದಿ ಅವರ ಮಾರ್ಗದರ್ಶನದಲ್ಲಿ, ಅವರು ತಮ್ಮ ಸ್ಥಿತಿಯನ್ನು ಸರಿಪಡಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸಿದರು.
ದೀಪಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಎಂಬ ಇತಿಹಾಸ ನಿರ್ಮಿಸಿದರು. 2016 ರ ರಿಯೊ ಗೇಮ್ಸ್‌ನಲ್ಲಿ, ವಾಲ್ಟ್ ಈವೆಂಟ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಲ್ಲದೆ, ಕೂದಲೆಳೆಯ ಅಂತರದಲ್ಲಿ ಪದಕ ವೇದಿಕೆಯನ್ನು ತಪ್ಪಿಸಿಕೊಂಡಿದ್ದರು. ಅದರಲ್ಲೂ ಜಿಮ್ನಾಸ್ಟಿಕ್ಸ್‌ನಲ್ಲಿ ಅತ್ಯಂತ ಕಷ್ಟಕರವಾದ ಪ್ರೊಡುನೋವಾ ವಾಲ್ಟ್ ವ್ಯಾಪಕ ಮೆಚ್ಚಿಗೆಯನ್ನು ಗಳಿಸಿತ್ತು.
ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾದ ಕರ್ನಾಟಕ ಮೂಲದ ಟೀಮ್ ಇಂಡಿಯಾ ಮಾಜಿ ಆಟಗಾರನ ತಾಯಿ!
ಆಕೆಯ ಒಲಿಂಪಿಕ್ ಸಾಧನೆಯನ್ನು ಹೊರತಾಗಿ, ಕರ್ಮಾಕರ್ ಅವರ ವೃತ್ತಿಜೀವನದಲ್ಲಿ ಹಲವಾರು ಮೀಲಿಗಲ್ಲುಗಳಿವೆ. 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿದ್ದರು. 2018 ರಲ್ಲಿ ನಡೆದ FIG ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಜಯಗಳಿಸುವ ಮೂಲಕ ಜಾಗತಿಕ ಜಿಮ್ನಾಸ್ಟಿಕ್ಸ್ ಈವೆಂಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬಾಗಲಕೋಟೆ ಹುಡುಗನ ವಿದ್ಯೆಗಾಗಿ ಕೊಟ್ಟ ಮಾತನ್ನು ಉಳಿಸಿಕೊಂಡ ಕೆಎಲ್ ರಾಹುಲ್!
ದೀಪಾ ಕರ್ಮಾಕರ್ ಕ್ರೀಡಾ ಜೀವನ ಸವಾಲುಗಳು ಇಲ್ಲದೇ ಇದ್ದಿರಲಿಲ್ಲ. ಗಾಯದ ಕಾರಣಕ್ಕಾಗಿ ಪ್ರಮುಖ ಇವೆಂಟ್‌ಗಳನ್ನು ತಪ್ಪಿಸಿಕೊಂಡಿದ್ದರು.ಈ ವರ್ಷದ ಮೇನಲ್ಲಿ, ದೀಪಾ ಕರ್ಮಾಕರ್ ಏಷ್ಯನ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಾಲ್ಟ್ ಸ್ಪರ್ಧೆಯನ್ನು ಗೆದ್ದು ಚಿನ್ನದ ಪದಕ ಗಳಿಸಿದ ಮೊದಲ ಭಾರತೀಯರಾದರು. ಉಜ್ಬೇಕಿಸ್ತಾನದ ರಾಜಧಾನಿಯಲ್ಲಿ ನಡೆದ ಸ್ಪರ್ಧೆಯ ಅಂತಿಮ ದಿನದಂದು ದೀಪಾ ವಾಲ್ಟ್ ಫೈನಲ್‌ನಲ್ಲಿ ಸರಾಸರಿ 13.566 ಅಂಕಗಳನ್ನು ಗಳಿಸಿದರು.