Asianet Suvarna News Asianet Suvarna News

ಏಷ್ಯಾಕಪ್’ಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿಗೆ ರೆಸ್ಟ್, ಕನ್ನಡಿಗನಿಗೆ ಸ್ಥಾನ

ತಂಡದಲ್ಲಿ ಕೆಲ ಅಚ್ಚರಿಗಳಿಗೆ ಕಾರಣವಾಗಿರುವ ಆಯ್ಕೆಗಳನ್ನು ಮಾಡಲಾಗಿದ್ದು, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ ತಂಡದ ನಾಯಕರಾಗಿ ಆಯ್ಕೆಯಾಗಿದ್ದರೆ, ಮತ್ತೋರ್ವ ಆರಂಭಿಕ ಶಿಖರ್ ಧವನ್ ಅವರಿಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

India squad Announced for Asia Cup 2018
Author
Mumbai, First Published Sep 1, 2018, 2:00 PM IST

ಮುಂಬೈ[ಸೆ.01]: ಇದೇ ತಿಂಗಳು 15ರಿಂದ ಯುನೈಟೆಡ್ ಅರಬ್ ಎಮಿರಾಯಿಟ್ಸ್’ನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ 16 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡದಲ್ಲಿ ಕೆಲ ಅಚ್ಚರಿಗಳಿಗೆ ಕಾರಣವಾಗಿರುವ ಆಯ್ಕೆಗಳನ್ನು ಮಾಡಲಾಗಿದ್ದು, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ ತಂಡದ ನಾಯಕರಾಗಿ ಆಯ್ಕೆಯಾಗಿದ್ದರೆ, ಮತ್ತೋರ್ವ ಆರಂಭಿಕ ಶಿಖರ್ ಧವನ್ ಅವರಿಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಇನ್ನು 2017ರ ಡಿಸೆಂಬರ್ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಕನ್ನಡಿಗ ಮನೀಶ್ ಪಾಂಡೆ ತಂಡ ಕೂಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ಚತುಷ್ಕೋನ ಸರಣಿಯಲ್ಲಿ 306 ರನ್ ಸಿಡಿಸಿ ಗಮನ ಸೆಳೆದಿದ್ದ ಪಾಂಡೆ ಕೊನೆಗೂ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಏಷ್ಯಾಕಪ್’ನಲ್ಲಿ ಕನ್ನಡಿಗರಾಗ ಮನೀಶ್ ಪಾಂಡೆ ಹಾಗೂ ಕೆ.ಎಲ್ ರಾಹುಲ್ ಅವರಿಗೆ ಸ್ಥಾನ ದೊರಕಿದ್ದು, ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್’ವಾಲ್ ಅವರನ್ನು ಕಡೆಗಣಿಸಲಾಗಿದೆ. ಈಗಾಗಲೇ ದೇಶಿಯಾ ಟೂರ್ನಿಗಳಲ್ಲಿ ಅತ್ಯದ್ಭುತ ಪ್ರದರ್ಶನ ತೋರುತ್ತಿರುವ ಅಗರ್’ವಾಲ್ ಅವರಿಗೆ ಏಷ್ಯಾಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಇದನ್ನು ಓದಿ: ಏಷ್ಯಾಕಪ್: ಈ ಮೂವರಿಗೆ ಟೀಂ ಇಂಡಿಯಾ ರೆಸ್ಟ್..?

ಇನ್ನು ಇಬ್ಬರು ತಜ್ಞ ವಿಕೆಟ್ ಕೀಪರ್’ಗಳ ಜತೆಗೆ ಅಂಬಟಿ ರಾಯುಡು ಕೂಡಾ ತಂಡ ಕೂಡಿಕೊಂಡಿದ್ದಾರೆ. ಧೋನಿ ಹಾಗೂ ದಿನೇಶ್ ಕಾರ್ತಿಕ್ ಈಗಾಗಲೇ ತಂಡದ ಪ್ರಮುಖ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನು ಓದಿ: ಸೆ.19ಕ್ಕೆ ಭಾರತ-ಪಾಕಿಸ್ತಾನ ಕ್ರಿಕೆಟ್ ಹೋರಾಟ!

ಹೀಗಿದೆ ಟೀಂ ಇಂಡಿಯಾದ 16 ಆಟಗಾರರನ್ನೊಳಗೊಂಡ ತಂಡ

Follow Us:
Download App:
  • android
  • ios