ಸೆ.19ಕ್ಕೆ ಭಾರತ-ಪಾಕಿಸ್ತಾನ ಕ್ರಿಕೆಟ್ ಹೋರಾಟ!

First Published 25, Jul 2018, 11:50 AM IST
India face Pakistan in Dubai for Asia Cup
Highlights

ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೋರಾಟ ಇಡೀ ವಿಶ್ವದ ಕುತೂಹಲ ಕೆರಳಿಸುತ್ತದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಇದೀಗ ಭಾರತ ಹಾಗೂ ಪಾಕಿಸ್ತಾನ ತಂಡ ಮತ್ತೆ ಮುಖಾಮುಖಿಯಾಗುತ್ತಿದೆ.  ಇಂಡೋ-ಪಾಕ್ ಕ್ರಿಕೆಟ್ ಟೂರ್ನಿಯ ಸಂಪೂರ್ಣ ವಿವರ ಇಲ್ಲಿದೆ.
 

ನವದೆಹಲಿ(ಜು.25): 2008ರ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಮಂಗಳವಾರ ಪ್ರಕಟಗೊಂಡಿತು. ಸೆ.15 ರಿಂದ ಟೂರ್ನಿ ಆರಂಭಗೊಳ್ಳಲಿದ್ದು ಯುಎಇ ಆತಿಥ್ಯ ವಹಿಸಲಿದೆ. ದುಬೈ ಹಾಗೂ ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ. 

2019ರಲ್ಲಿ ಏಕದಿನ ವಿಶ್ವಕಪ್ ನಡೆಯುವುದರಿಂದ ಈ ಬಾರಿ ಟೂರ್ನಿ ಏಕದಿನ ಮಾದರಿಯಲ್ಲಿ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳು ತಮ್ಮ ಸ್ಥಾನ ಗಳನ್ನು ಖಚಿತಪಡಿಸಿಕೊಂಡಿವೆ. ಯುಎಇ,ಸಿಂಗಾಪುರ, ಓಮನ್, ನೇಪಾಳ, ಮಲೇಷ್ಯಾ, ಹಾಂಕಾಂಗ್ ಅರ್ಹತಾ ಸುತ್ತಿನಲ್ಲಿ ಸೆಣಸಾಡಲಿವೆ. 

ಈ ಪೈಕಿ ಒಂದು ತಂಡ ಪ್ರಧಾನ ಹಂತಕ್ಕೇರಲಿದೆ. ಭಾರತ, ಪಾಕಿಸ್ತಾನ ಹಾಗೂ ಅರ್ಹತೆ ಪಡೆಯುವ ತಂಡ ‘ಎ’ ಗುಂಪಿನಲ್ಲಿವೆ. ಶ್ರೀಲಂಕಾ, ಬಾಂಗ್ಲಾ, ಆಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ. ಸೆ.18ಕ್ಕೆ ಭಾರತ, ಅರ್ಹತೆ ಪಡೆಯುವ ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಲಿ ದ್ದು, ಸೆ.19ಕ್ಕೆ ಪಾಕಿಸ್ತಾನವನ್ನು ಎದುರಿಸಲಿದೆ. 

ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು, ‘ಸೂಪರ್ 4’ ಹಂತಕ್ಕೆ ಪ್ರವೇಶಿಸಲಿವೆ. ಈ ಹಂತದಲ್ಲಿ ಪ್ರತಿ ತಂಡ ಉಳಿದ ೩ ತಂಡಗಳೊಂದಿಗೆ ಸೆಣಸಲಿದೆ.ಸೆ.28ಕ್ಕೆ ದುಬೈನಲ್ಲಿ ಫೈನಲ್ ನಡೆಯಲಿದೆ.

loader