ಭಾರತ ತಂಡದ ಕೋಚ್ ಸಂದರ್ಶನ ವಿಳಂಬ

ಟೀಂ ಇಂಡಿಯಾ ಕೋಚ್ ಹುದ್ದೆಯ ಸಂದರ್ಶನ ನಿಗದಿಗಿಂತ ತಡವಾಗಿ ನಡೆಯಲಿದೆ. ಯಾಕೆ ಹೀಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ...

India head coach interview likely after Independence Day Report

ನವದೆಹಲಿ(ಆ.11): ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

ಮತ್ತೊಂದು ಅವಧಿಗೆ ಶಾಸ್ತ್ರಿಯೇ ಟೀಂ ಇಂಡಿಯಾ ಕೋಚ್‌?

ಮಾಜಿ ನಾಯಕ ಕಪಿಲ್ ದೇವ್, ಅನ್ಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸ್ವಾತಂತ್ರ್ಯ ದಿನಾಚರಣೆ (ಆ. 15) ಬಳಿಕ ಕೋಚ್ ಆಯ್ಕೆಯ ಸಂದರ್ಶನ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಟೀಂ ಇಂಡಿಯಾ ನೂತನ ಕೋಚ್‌ಗಾಗಿ 2000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಹಿಂದೆ ಆ. 13, 14 ರಂದು ಕೋಚ್ ಆಯ್ಕೆಗೆ ಸಂದರ್ಶನ ನಡೆಯಲಿದೆ ಎಂದು ಹೇಳಲಾಗಿತ್ತು.

ಮಲ ಮಗಳ ಪಾಸ್‌ಪೋರ್ಟ್‌ಗೆ ಸಹಿ: ಕುಂಬ್ಳೆಗೆ ಸಂಕಷ್ಟ

ಟೀಂ ಇಂಡಿಯಾ ಕೋಚ್ ಹುದ್ದೆಗೆ ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಲಂಕಾ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ, ಟಾಮ್ ಮೂಡಿ, ರಾಬಿನ್ ಸಿಂಗ್ ಮುಂತಾದ ದಿಗ್ಗಜ ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮುಂದಿನ ಕೋಚ್ ಯಾರಾಗಬಹುದು ಎನ್ನುವ ಕುತೂಹಲ ಗರಿಗೆದರಿದೆ. 
 

Latest Videos
Follow Us:
Download App:
  • android
  • ios