ವೆಸ್ಟ್ ಇಂಡೀಸ್ ವಿರುದ್ಧ ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಭರ್ಜರಿ ಶತಕ ಸಿಡಿಸುವುದರೊಂದಿಗೆ ಸ್ಮರಣಿಯವಾಗಿಸಿಕೊಂಡರು. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಬಳಿಕ ಶತಕ ಸಿಡಿಸಿದ ಅತಿ ಕಿರಿಯ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೂ ಮುಂಬೈ ಯುವ ಪ್ರತಿಭೆ ಪಾತ್ರವಾಗಿದ್ದಾರೆ.
ರಾಜ್’ಕೋಟ್[ಅ.05]: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಹಲವಾರು ದಾಖಲೆ ಬರೆದ ಮುಂಬೈನ ಯುವ ಪ್ರತಿಭೆ ಪೃಥ್ವಿ ಶಾ ಅವರತ್ತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪೃಥ್ವಿ ಬ್ಯಾಟಿಂಗ್ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮನಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.
ಇದನ್ನು ಓದಿ: ಇಂಡೋ-ವಿಂಡೀಸ್ ಟೆಸ್ಟ್: ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ ಪೃಥ್ವಿ ಶಾ
ವೆಸ್ಟ್ ಇಂಡೀಸ್ ವಿರುದ್ಧ ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಭರ್ಜರಿ ಶತಕ ಸಿಡಿಸುವುದರೊಂದಿಗೆ ಸ್ಮರಣಿಯವಾಗಿಸಿಕೊಂಡರು. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಬಳಿಕ ಶತಕ ಸಿಡಿಸಿದ ಅತಿ ಕಿರಿಯ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೂ ಮುಂಬೈ ಯುವ ಪ್ರತಿಭೆ ಪಾತ್ರವಾಗಿದ್ದಾರೆ. ಪೃಥ್ವಿ ಶಾ ಬ್ಯಾಟಿಂಗ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ರವಿ ಶಾಸ್ತ್ರಿ, ಪದಾರ್ಪಣೆ ಪಂದ್ಯದಲ್ಲೇ ಮುಕ್ತ ಹಾಗೂ ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿದ ಪೃಥ್ವಿ ಶಾಗೆ ಅಭಿನಂದನೆಗಳು. ಪೃಥ್ವಿ ಬ್ಯಾಟಿಂಗ್ ನೋಡಲು ವಿರೇಂದ್ರ ಸೆಹ್ವಾಗ್ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರಂತೆ ಕಾಣುತ್ತದೆ ಎಂದು ಕೊಂಡಾಡಿದ್ದಾರೆ. ವೆಸ್ಟ್ ಇಂಡೀಸ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಪೃಥ್ವಿ ಶಾ ಕೇವಲ 56 ಎಸೆತಗಳಲ್ಲಿ ಅರ್ಧಶತಕ ಹಾಗೂ 99 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.
ಇನ್ನು ಶಾಸ್ತ್ರಿ ಮಾತಿಗೆ ಟಾಂಗ್ ಕೊಟ್ಟಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಅಂತರಾಷ್ಟ್ರೀಯ ಪದಾರ್ಪಣೆ ಪಂದ್ಯದಲ್ಲೇ ಪೃಥ್ವಿ ಶಾ ಶತಕ ಸಿಡಿಸಿದ್ದು ಅದ್ಭುತವಾಗಿತ್ತು. ಆದರೆ ಪೃಥ್ವಿ ಆಟವನ್ನು ಈಗಲೇ ಸೆಹ್ವಾಗ್’ಗೆ ಹೋಲಿಸುವುದು ಸರಿಯಲ್ಲ. ವೀರೂ ಒಬ್ಬ ಜೀನಿಯಸ್ ಕ್ರಿಕೆಟಿಗ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲೂ ಯುವ ಆಟಗಾರ ಪೃಥ್ವಿ ರನ್ ಗಳಿಸುವ ವಿಶ್ವಾಸವಿದೆ. ಆದರೆ ಈಗಲೇ ಸೆಹ್ವಾಗ್ ಜತೆಗೆ ಹೋಲಿಕೆ ಸಮಂಜಸವಲ್ಲ ಎಂದಿದ್ದಾರೆ ದಾದಾ.
ಇದನ್ನು ಓದಿ: ಶತಕ ವೀರ ಪೃಥ್ವಿ ಶಾ ಕಾಲೆಳೆದ ಕಾಂಡೋಮ್ ಕಂಪೆನಿ!
ಸೌರವ್ ಗಂಗೂಲಿ ಕೂಡಾ ಲಾರ್ಡ್ಸ್’ನಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಅದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಕೂಡಾ ಪದಾರ್ಪಣೆ ಮಾಡಿದ್ದರು. ದ್ರಾವಿಡ್ 95 ರನ್ ಬಾರಿಸಿ ಕೇವಲ 5 ರನ್’ಗಳಿಂದ ಶತಕ ವಂಚಿತರಾಗಿದ್ದರು.
