ಕ್ರಿಕೆಟ್ ಅಭಿಮಾನಿಗಳಿಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಗುಡ್‌ನ್ಯೂಸ್ ನೀಡಿದೆ. ಭಾರತ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಕುಳಿತು ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶ ನೀಡಿದೆ.

ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಸದ್ಯ ಲಂಕಾ ವಿರುದ್ಧ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಆಗಸ್ಟ್ 15ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಇದರ ನಡುವೆಯೇ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದು, ಭಾರತದ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಉಚಿತವಾಗಿ ವೀಕ್ಷಿಸಲು ಅವಕಾಶವನ್ನು ನೀಡಿದೆ. ಯುವ ಜನತೆಗೆ ಟೆಸ್ಟ್ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಟೆಸ್ಟ್ ಕ್ರಿಕೆಟ್ ಬಗ್ಗೆ ಇಂದಿನ ಯುವ ಜನತೆ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಉಚಿತ ಪ್ರವೇಶ ಕಲ್ಪಿಸಿದರೆ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುವ ಉದ್ದೇಶ ಈ ನಿರ್ಧಾರದ ಹಿಂದಿದೆ.

ಐಸಿಸಿ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ 5ನೇ ಸ್ಥಾನ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-26ರ ಭಾಗವಾಗಿ ಈ ಸರಣಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಭಾರತ, ಶ್ರೀಲಂಕಾ ತಂಡಗಳು ಐಸಿಸಿ ಅಂಕಪಟ್ಟಿಯಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದೆ. ಎರಡು ತಂಡಗಳು ಸರಣಿಯಲ್ಲಿ ಗೆದ್ದು ಮುನ್ನಡೆ ಪಡೆದುಕೊಳ್ಳುವ ಪ್ಲ್ಯಾನ್ನೊಂದಿಗೆ ಕಣಕ್ಕೆ ಉಳಿಯುತ್ತಿವೆ. ಅದರಲ್ಲೂ ಟೀಂ ಇಂಡಿಯಾಗೆ ಶ್ರೀಲಂಕಾ ವಿರುದ್ಧ ಸರಣಿ ಗೆಲುವು ಅತ್ಯಗತ್ಯ ಎಂದು ಹೇಳಬಹುದು.

ವರ್ಲ್ಡ್ ಕ್ಲಾಸ್ ಬ್ಯಾಟರ್‌ಗಳನ್ನು ಹೊಂದಿರುವ ಭಾರತದ ವಿರುದ್ಧದ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾದುಕುಳಿತ್ತಿದ್ದಾರೆ. ಇದರ ನಡುವೆಯೇ ಟಿಕೆಟ್ ಮಾರಾಟದಿಂದ ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ಗೆ ಭಾರೀ ಆದಾಯ ಲಭ್ಯವಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಾತ್ರ, ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಬಂದು ಉಚಿತವಾಗಿ ಪಂದ್ಯ ವೀಕ್ಷಣೆ ಮಾಡಿ ಎಂದು ಘೋಷಣೆ ಮಾಡಿದೆ. ಕ್ರಿಕೆಟ್ ಇಷ್ಟಪಡುವವರು ಕುಟುಂಬ ಸಮೇತ ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯವನ್ನು ನೋಡಲು ಈ ಫ್ರೀ ಆಫರ್ ನೀಡಿದೆ.

ಅಷ್ಟೇ ಅಲ್ಲದೇ, ಗಾಲೆ ಮತ್ತು ಕೊಲಂಬೊ ಕ್ರೀಡಾಂಗಣದಲ್ಲಿ ಯಾವ ಗೇಟ್ ನಿಂದ ಫ್ರೀ ಎಂಟ್ರಿ ಸಿಗಲಿದೆ ಎಂಬ ಮಾಹಿತಿಯನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹಂಚಿಕೊಂಡಿದೆ. ಗೇಟ್ ನಂಬರ್ 3, 4, 5, 7 ರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಫ್ರೀ ಎಂಟ್ರಿ ಇರಲಿದೆ. ಟಿ20 ಕ್ರಿಕೆಟ್ಗೆ ಹೆಚ್ಚಿನ ಆಕರ್ಷಣೆ ಸಿಗುತ್ತಿರುವ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ನೋಡುವ ಅಭಿಮಾನಿಗಳ ಸಂಖ್ಯೆ ಕುಸಿಯುತ್ತಿರುವ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಹತ್ವದ ನಿರ್ಧಾರ ಮಾಡಿದೆ.

Scroll to load tweet…

ಸದ್ಯ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಬಳಿಕ, ಅಂದರೆ ಆಗಸ್ಟ್ 15ರ ಬಳಿಕ ಕ್ರೀಡಾಂಗಣದಲ್ಲಿ ಶುಭ್ ಮನ್ ಗಿಲ್ ನೇತೃತ್ವದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಕಣಕ್ಕೆ ಇಳಿಯಲಿದೆ. ಆ ಬಳಿಕ ಸರಣಿಯ ಅಂತಿಮ ಪಂದ್ಯ ಆಗಸ್ಟ್ 23 ರಿಂದ 27ರ ವರೆಗೂ ಕೊಲಂಬೊದಲ್ಲಿ ನಡೆಯಲಿದೆ.

ಟೀಂ ಇಂಡಿಯಾ ತಂಡ ಇಂತಿದೆ

ಯಶಸ್ವಿ ಜೈಸ್ವಾಲ್, ಶುಭ್ ಮನ್ ಗಿಲ್, ಪಡಿಕ್ಕಲ್, ರಿಷಭ್ ಪಂತ್, ಕೆಎಲ್ ರಾಹುಲ್, ಜುರೇಲ್, ಜಡೇಜಾ, ಕುಲ್ದೀಪ್ ಯಾದವ್, ಮಾನವಿ ಸುತಾರ್, ಸಾರಾಂಶ ಜೈನ್, ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಔಕಿಬ್ ನಬಿ.