ಹ್ಯಾಮಿಲ್ಟನ್[ಫೆ.10]: ಭಾರತ ಹಾಗೂ ಜಗತ್ತಿನಾದ್ಯಂತ ಮಹೇಂದ್ರ ಸಿಂಗ್ ಧೋನಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸದ ವೇಳೆಯಲ್ಲೂ ಭಾರತೀಯ ಅಭಿಮಾನಿಗಳು ಮೈದಾನಕ್ಕೆ ಬಂದು ಟೀಂ ಇಂಡಿಯಾ ಬೆಂಬಲಿಸಿದ್ದಾರೆ. ಅದರಲ್ಲೂ ಈ ಎರಡು ಸರಣಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಧೋನಿ ಮತ್ತಷ್ಟು ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಟೀಂ ಇಂಡಿಯಾ ರೋಚಕ ಸೋಲಿನ ಬಗ್ಗೆ ಟ್ವಿಟರಿಗರು ಹೇಳಿದ್ದಿಷ್ಟು...

ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಧೋನಿ ಮಿಂಚಿನ ಸ್ಟಂಪ್ ಮಾಡುವ ಮೂಲಕ ತಾವು ವಿಕೆಟ್ ಹಿಂದೆ ಕಿಂಗ್ ಎಂದು ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದರು. ಧೋನಿ ವಿಕೆಟ್’ಕೀಪಿಂಗ್ ಮಾಡುವ ವೇಳೆ ಅಭಿಮಾನಿಯೊಬ್ಬ ಮೈದಾನದ ಭದ್ರತಾಪಡೆಯನ್ನು ಭೇದಿಸಿ ತ್ರಿವರ್ಣ ಧ್ವಜ ಹಿಡಿದು ಧೋನಿ ಕಾಲಿಗೆ ನಮಸ್ಕರಿಸಿದ ಅಪರೂಪದ ಘಟನೆಗೆ ಹ್ಯಾಮಿಲ್ಟನ್’ನ ಸೆಡನ್ ಪಾರ್ಕ್ ಮೈದಾನ ಸಾಕ್ಷಿಯಾಯಿತು.

87 ವರ್ಷದ ಅಭಿಮಾನಿ ಆಸೆ ಈಡೇರಿಸಿದ ಧೋನಿ

ಅಭಿಮಾನಿ ಧೋನಿ ಪಾದಕ್ಕೆರಗುವ ವೇಳೆ ತ್ರಿವರ್ಣ ಧ್ವಜ ನೆಲಕ್ಕೆ ತಾಗುವುದರಲ್ಲಿತ್ತು. ಈ ವೇಳೆ ತ್ರಿವರ್ಣ ಧ್ವಜ ಹಿಡಿದು ಮೇಲೆತ್ತಿಕೊಂಡರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಧೋನಿ ಮಿಂಚಿನ ಸ್ಟಂಪಿಂಗ್’ಗೆ ಪೆವಿಲಿಯನ್ ಸೇರಿದ ಸೈಫರ್ಟ್

ಹೀಗಿತ್ತು ಆ ಕ್ಷಣ:

ವಿಕೆಟ್’ಕೀಪಿಂಗ್’ನಲ್ಲಿ ಧೋನಿ ಮಿಂಚಿದರೂ, ಬ್ಯಾಟಿಂಗ್’ನಲ್ಲಿ ಕೇವಲ 2 ರನ್ ಬಾರಿಸಿ ನಿರಾಸೆ ಅನುಭವಿಸಿದರು. ಭಾರತ ಮೂರನೇ ಟಿ20 ಪಂದ್ಯದಲ್ಲಿ ಕೇವಲ 4 ರನ್’ಗಳ ರೋಚಕ ಸೋಲುಂಡು ಸರಣಿ ಕೈಚೆಲ್ಲಿತು.