ಲಾರ್ಡ್ಸ್(ಆ.11): ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಸಂಪೂರ್ಣ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಕ್ರಿಸ್ ವೋಕ್ಸ್ ಆಕರ್ಷಕ ಶತಕ ಹಾಗೂ ಜಾನಿ ಬೈರಿಸ್ಟೋ ಸಿಡಿಸಿದ 93 ರನ್ ನೆರವಿನಿಂದ ಇಂಗ್ಲೆಂಡ್ 3ನೇ ದಿನದಾಟದ ಅಂತ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 357 ರನ್ ಸಿಡಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 250 ರನ್ ಮುನ್ನಡೆ ಪಡೆದುಕೊಂಡಿದೆ.

 

 

ತೃತೀಯ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ  ಕೆಟನ್ ಜೆನ್ನಿಂಗ್ಸ್ 11 ರನ್ ಸಿಡಿಸಿ ಔಟಾದರು. ಇನ್ನ ಹಿರಿಯ ಬ್ಯಾಟ್ಸ್‌ಮನ್ ಆಲಿಸ್ಟ್ರೈರ್ ಕುಕ್ 21 ರನ್‌ಗೆ ನಿರ್ಮಿಸಿದರು.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ಮಲಾನ್ ಬದಲು ಅವಕಾಶ ಪಡೆದ ಯುವ ಬ್ಯಾಟ್ಸ್‌ಮನ್ ಒಲ್ಲಿ ಪೋಪ್ 28 ರನ್‌ ಕಾಣಿಕೆ ನೀಡಿ ನಿರ್ಗಮಿಸಿದರು.  ಎಚ್ಚರಿಕೆಯ ಹೋರಾಟಕ್ಕೆ ಮುಂದಾಗಿದ್ದ ನಾಯಕ ಜೋ ರೂಟ್ 19 ರನ್ ಸಿಡಿಸಿ ನಿರ್ಗಮಿಸಿದರು. 

2ನೇ ಸೆಶನ್ ಆರಂಭದಲ್ಲೇ ಜೋಸ್ ಬಟ್ಲರ್ 24 ರನ್ ಸಿಡಿಸಿ ಔಟಾದರರು. ಆದರೆ ಜಾನಿ ಬೈರಿಸ್ಟೋ ಹಾಗೂ ಕ್ರಿಸ್ ವೋಕ್ಸ್ ಜೊತೆಯಾಟ ಭಾರತ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು. ದ್ವಿತೀಯ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬದಲು ಅವಕಾಶ ಪಡೆದ ಕ್ರಿಸ್ ವೋಕ್ಸ್ ಭರ್ಜರಿ ಶತಕ ಸಿಡಿಸಿದರು.  ಇನ್ನು ಜಾನಿ ಬೈರಿಸ್ಟೋ ಅಜೇಯ 93 ರನ್ ಸಿಡಿಸಿ ನಿರ್ಗಮಿಸಿದರು. ನಂತರ ಸ್ಯಾಮ್ ಕುರ್ರನ್ ಹಾಗೂ ವೋಕ್ಸ್ ಮತ್ತೆ ಅಬ್ಬರಿಸಿದರು.

ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 357 ರನ್ ಸಿಡಿಸಿ,  250 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಮಂದ ಬೆಳಕಿನ ಕಾರಣ ಪಂದ್ಯವನ್ನ ಸ್ಥಗಿತಗೊಳಿಸಲಾಯಿತು. ಕ್ರಿಸ್ ವೋಕ್ಸ್ ಅಜೇಯ 120 ಹಾಗೂ ಕುರ್ರನ್ ಅಜೇಯ 20  ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮೇಲುಗೈ ಸಾಧಿಸಿರುವ ಇಂಗ್ಲೆಂಡ್ , ಕೊಹ್ಲಿ ಸೈನ್ಯಕ್ಕೆ ಮತ್ತೊಂದು ಶಾಕ್ ನೀಡಲು ರೆಡಿಯಾಗಿದೆ.