Asianet Suvarna News Asianet Suvarna News

ಡೆಲ್ಲಿಯಲ್ಲಿ ಕೋಚ್ ಮೇಲೆ ಯುವ ಕುಸ್ತಿಪಟು ಮನಬಂದಂತೆ ಹಲ್ಲೆ..! ಕೋಚ್ ತಲೆಗೆ 30 ಹೊಲಿಗೆ

ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ರೆಫ್ರಿಯೂ ಆಗಿರುವ ಜೈಬೀರ್ ಸಿಂಗ್ ದಹಿಯಾ ಎಂಬವರಿಗೆ ಟ್ರೈನೀ ಕುಸ್ತಿಪಟು ಹಲ್ಲೆ ನಡೆಸಿದ್ದಾನೆ. ಇದರಿಂದ ಜೈಬೀರ್ ತಲೆಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 30 ಹೊಲಿಗೆ ಹಾಕಲಾಗಿದೆ.

Wrestlers asked to vacate Chhatrasal Stadium after assault on coach kvn
Author
First Published May 3, 2024, 10:31 AM IST

ನವದೆಹಲಿ: ಯುವ ಕುಸ್ತಿಪಟುವನ್ನು ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಕೊಲೆಗೈಯ್ಯುವ ಮೂಲಕ ಸುದ್ದಿಯಾಗಿದ್ದ ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಯುವ ಕುಸ್ತಿಪಟು ತನ್ನ ಸ್ನೇಹಿತರೊಂದಿಗೆ ಸೇರಿ ಕೋಚ್‌ಗೆ ದೊಣ್ಣೆಯಿಂದ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ರೆಫ್ರಿಯೂ ಆಗಿರುವ ಜೈಬೀರ್ ಸಿಂಗ್ ದಹಿಯಾ ಎಂಬವರಿಗೆ ಟ್ರೈನೀ ಕುಸ್ತಿಪಟು ಹಲ್ಲೆ ನಡೆಸಿದ್ದಾನೆ. ಇದರಿಂದ ಜೈಬೀರ್ ತಲೆಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 30 ಹೊಲಿಗೆ ಹಾಕಲಾಗಿದೆ. ಘಟನೆ ಬಳಿಕ ಕ್ರೀಡಾಂಗಣದ ಹಾಸ್ಟೆಲ್‌ನಲ್ಲಿರುವ 200ರಷ್ಟು ಕುಸ್ತಿಪಟುಗಳನ್ನು ಕ್ರೀಡಾ ಇಲಾಖೆ ಹೊರಹಾಕಿದೆ. ಆದರೆ ಅಗ್ರ ಕುಸ್ತಿಪಟುಗಳಾದ ರವಿ ದಹಿಯಾ, ಅಮನ್, ದೀಪಕ್ ಪೂನಿಯಾ, ಸುಮಿತ್ ಮಲಿಕ್ ಸೇರಿದಂತೆ ಪ್ರಮುಖರು ಕ್ರೀಡಾಂಗಣದಲ್ಲಿ ತರಬೇತಿ ಮುಂದುವರಿಸಿದ್ದಾರೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.

ಥಾಮಸ್‌, ಊಬರ್‌ ಕಪ್‌: ಭಾರತ ತಂಡಗಳಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು

2021ರಲ್ಲಿ ರಾಷ್ಟ್ರೀಯ ಯುವ ಚಾಂಪಿಯನ್ ಸಾಗರ್ ಧನಕರ್ ಎಂಬವರಿಗೆ ಇದೇ ಕ್ರೀಡಾಂಗಣದಲ್ಲಿ ಸುಶೀಲ್ ಹಲ್ಲೆ ನಡೆಸಿದ್ದರು. ಕೆಲ ದಿನಗಳ ಬಳಿಕ ಸಾಗರ್ ಮೃತಪಟ್ಟಿದ್ದು, 2021ರ ಮೇನಲ್ಲಿ ಸುಶೀಲ್‌ರನ್ನು ಬಂಧಿಸಲಾಗಿತ್ತು. ಅವರು ಈಗಲೂ ಜೈಲಿನಲ್ಲಿದ್ದಾರೆ.

ಐಪಿಎಲ್‌ನಲ್ಲಿ ಆಡುತ್ತಿರುವ 8 ಆಫ್ಘಾನ್‌ ಆಟಗಾರರು ಟಿ20 ವಿಶ್ವಕಪ್‌ಗೆ ಆಯ್ಕೆ

ಕಾಬೂಲ್‌: ಸದ್ಯ ಚಾಲ್ತಿಯಲ್ಲಿರುವ ಐಪಿಎಲ್‌ 17ನೇ ಆವೃತ್ತಿಯಲ್ಲಿ ಆಡುತ್ತಿರುವ 8 ಅಫ್ಘಾನಿಸ್ತಾನಿ ಆಟಗಾರರು ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ. 15 ಸದಸ್ಯರ ತಂಡವನ್ನು ತಾರಾ ಆಲ್ರೌಂಡರ್‌ ರಶೀದ್‌ ಖಾನ್‌ ಮುನ್ನಡೆಸಲಿದ್ದಾರೆ.

ತಂಡ: ರಶೀದ್‌ ಖಾನ್‌ (ನಾಯಕ), ರಹಮಾನುಲ್ಲಾ ಗುರ್ಬಾಜ್‌, ಇಬ್ರಾಹಿಂ ಜದ್ರಾನ್‌, ಅಜ್ಮತುಲ್ಲಾ ಒಮರ್‌ಝಾಯ್‌, ನಜೀಬುಲ್ಲಾ ಜದ್ರಾನ್‌, ಮೊಹಮದ್‌ ಇಶಾಕ್‌, ಮೊಹಮದ್‌ ನಬಿ, ಗುಲ್ಬದಿನ್‌ ನೈಬ್‌, ಕರೀಂ ಜನತ್‌, ನಾಂಗ್ಯಾಲ್‌ ಖರೋತಿ , ಮುಜೀಬ್‌ ಉರ್‌ ರಹಮಾನ್‌, ನೂರ್‌ ಅಹ್ಮದ್‌, ನವೀನ್‌ ಉಲ್‌-ಹಕ್‌, ಫಜಲ್‌ಹಕ್‌ ಫಾರೂಕಿ, ಅಹ್ಮದ್‌ ಮಲಿಕ್‌.

ಚೆಪಾಕ್‌ನ ಕಿಂಗ್ಸ್‌ ಕದನದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್‌!

ಗಾಯಾಳು ವೇಗಿ ಮಯಾಂಕ್‌ ಐಪಿಎಲ್‌ನಿಂದಲೇ ಹೊರಕ್ಕೆ?

ನವದೆಹಲಿ: ಐಪಿಎಲ್‌ನಲ್ಲಿ ತಮ್ಮ ವೇಗದ ಮೂಲಕವೇ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿರುವ ಲಖನೌ ತಂಡದ ಬೌಲರ್‌ ಮಯಾಂಕ್‌ ಯಾದವ್‌ ಕಿಬ್ಬೊಟ್ಟೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಈ ಬಾರಿ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. 

ಆದರೆ ಅವರು ಬಿಸಿಸಿಐ ರಾಷ್ಟ್ರೀಯ ಗುತ್ತಿಗೆ ಪಡೆಯುವ ನಿರೀಕ್ಷೆಯಿದ್ದು, ಹೀಗಾದರೆ ಅವರಿಗೆ ಲಖನೌ ಫ್ರಾಂಚೈಸಿ ಬದಲು ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ನೀಡಲಿದೆ. ಮಯಾಂಕ್‌ ಮೊದಲೆರಡು ಪಂದ್ಯಗಳ ಬಳಿಕ ಗಾಯಗೊಂಡು 4 ವಾರಗಳ ಕಾಲ ಐಪಿಎಲ್‌ನಿಂದ ಹೊರಗುಳಿದಿದ್ದರು. ಬಳಿಕ ಮುಂಬೈ ವಿರುದ್ಧ ಪಂದ್ಯಕ್ಕೆ ಮರಳಿದ್ದರೂ ಮತ್ತೆ ಗಾಯಗೊಂಡು ಅರ್ಧದಲ್ಲೇ ಮೈದಾನ ತೊರೆದಿದ್ದರು.

Latest Videos
Follow Us:
Download App:
  • android
  • ios