ಕೊಚ್ಚಿ(ಫೆ.02): ಚೊಚ್ಚಲ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್ ಉದ್ಘಾಟನೆ ಆವೃತ್ತಿಗೆ ಶನಿವಾರ ಚಾಲನೆ ದೊರೆಯಲಿದೆ. 

ಲೀಗ್'ನಲ್ಲಿ ಪ್ರಶಸ್ತಿಗಾಗಿ ಒಟ್ಟು 6 ತಂಡಗಳು ಸೆಣಸಲಿದ್ದು, ಕೊಚ್ಚಿ ಮತ್ತು ಚೆನ್ನೈನಲ್ಲಿ ಚರಣಗಳು ನಡೆಯಲಿವೆ. ಲೀಗ್ ಒಟ್ಟು 21 ದಿನಗಳವರೆಗೆ ನಡೆಯಲಿದ್ದು, ಒಟ್ಟು 18 ಪಂದ್ಯಗಳು ನಡೆಯಲಿವೆ. 

ಚೊಚ್ಚಲ ಪ್ರೊ ವಾಲಿಬಾಲ್‌ ಲೀಗ್‌ನಲ್ಲಿ 6 ತಂಡಗಳು

ಕೊಚ್ಚಿ ಬ್ಲೂ ಸ್ಪೈಕರ್ಸ್‌, ಯು ಮುಂಬಾ ವ್ಯಾಲಿ, ಕ್ಯಾಲಿಕಟ್ ಹೀರೋಸ್, ಚೆನ್ನೈ ಸ್ಪಾರ್ಟನ್ಸ್, ಅಹ್ಮದಾಬಾದ್ ಡಿಫೆಂಡರ್ಸ್‌ ಮತ್ತು ಬ್ಲ್ಯಾಕ್‌ಹಾಕ್ಸ್ ಹೈದರಾಬಾದ್ ತಂಡಗಳು ಸೆಣಸಲಿವೆ. ಉದ್ಘಾಟನೆ ಪಂದ್ಯದಲ್ಲಿ ಕೊಚ್ಚಿ ಸ್ಪೈಕರ್ಸ್‌ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ. ಫೈನಲ್ ಫೆ.22ರಂದು ಚೆನ್ನೈನಲ್ಲಿ ನಡೆಯಲಿ