ಮೊದಲ ಆವೃತ್ತಿಯಲ್ಲಿ 6 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಆಯೋಜಕರು ಸೋಮವಾರ ತಿಳಿಸಿದ್ದಾರೆ. ತಂಡದ ಮಾಲೀಕರನ್ನು ಪ್ರಕಟಿಸಲಾಗಿದ್ದು, ಮುಂಬೈ ಮೂಲದ ತಂಡವನ್ನು ಪ್ರೊ ಕಬಡ್ಡಿಯ ಯು ಮುಂಬಾ ತಂಡದ ಮಾಲೀಕರು ಖರೀದಿಸಿದ್ದಾರೆ.

ಮುಂಬೈ(ನ.27): ಐಪಿಎಲ್‌ ಮಾದರಿಯ ಫ್ರಾಂಚೈಸಿ ವಾಲಿಬಾಲ್‌ ಪಂದ್ಯಾವಳಿ, ಪ್ರೊ ವಾಲಿಬಾಲ್‌ ಲೀಗ್‌ನ ಚೊಚ್ಚಲ ಆವೃತ್ತಿ ಫೆ.2, 2019ರಿಂದ ಆರಂಭಗೊಳ್ಳಲಿದೆ. 

ಮೊದಲ ಆವೃತ್ತಿಯಲ್ಲಿ 6 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಆಯೋಜಕರು ಸೋಮವಾರ ತಿಳಿಸಿದ್ದಾರೆ. ತಂಡದ ಮಾಲೀಕರನ್ನು ಪ್ರಕಟಿಸಲಾಗಿದ್ದು, ಮುಂಬೈ ಮೂಲದ ತಂಡವನ್ನು ಪ್ರೊ ಕಬಡ್ಡಿಯ ಯು ಮುಂಬಾ ತಂಡದ ಮಾಲೀಕರು ಖರೀದಿಸಿದ್ದಾರೆ. ಅಹಮದಾಬಾದ್‌, ಕ್ಯಾಲಿಕಟ್‌, ಚೆನ್ನೈ, ಮುಂಬೈ, ಹೈದರಾಬಾದ್‌ ಹಾಗೂ ಕೊಚ್ಚಿ ನಗರಗಳ ತಂಡಗಳು ಲೀಗ್‌ನಲ್ಲಿ ಆಡಲಿವೆ. 

Scroll to load tweet…

ಪಂದ್ಯಾವಳಿಯಲ್ಲಿ ಬೆಂಗಳೂರಿನ ತಂಡವಿಲ್ಲ. ಡಿಸೆಂಬರ್’ನಲ್ಲಿ ಆಟಗಾರರ ಹರಾಜು ನಡೆಯಲಿದೆ ಎನ್ನಲಾಗಿದೆ. ಫೆ.2ರಿಂದ 22ರ ವರೆಗೂ ನಡೆಯಲಿರುವ ಟೂರ್ನಿಗೆ ಕೊಚ್ಚಿ ಹಾಗೂ ಚೆನ್ನೈ ಆತಿಥ್ಯ ವಹಿಸಲಿದ್ದು, ಫೈನಲ್‌ ಸೇರಿ 18 ಪಂದ್ಯಗಳು ನಡೆಯಲಿವೆ.